ಮಡಿಕೇರಿ, ಜ. ೨೩: ಜೆಡಿಎಸ್ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಪ್ರಮುಖರಾದ ನಾಪಂಡ ಮುತ್ತಪ್ಪ ಅವರು ತಾವೇ ಅಭ್ಯರ್ಥಿ ಎಂಬುದಾಗಿ ಪ್ರಚಾರ ಮಾಡುತ್ತಿರುವುದು ತಿಳಿದು ಬಂದಿದೆ. ಜೆಡಿಎಸ್ ಪಕ್ಷ ರಾಜ್ಯದ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದ್ದರೂ, ಕೊಡಗಿನ ಎರಡು ಕ್ಷೇತ್ರಗಳಿಗೆ ಈತನಕವೂ ಯಾರ ಹೆಸರನ್ನು ಅಂತಿಮಗೊಳಿಸಿ ಆದೇಶ ಹೊರಡಿಸಿಲ್ಲ. ಆದರೆ ಇದೀಗ ನಾಪಂಡ ಮುತ್ತಪ್ಪ ಅವರು ಕಿರು ಹೊತ್ತಿಗೆಯೊಂದನ್ನು ಮುದ್ರಿಸಿ ಹಲವು ಭರವಸೆ-ತಮ್ಮ ಸೇವೆ-ಸಾಧನೆಗಳನ್ನು ಇದರಲ್ಲಿ ಪ್ರಕಟಿಸಿ ಮನೆ ಮನೆಗೆ ಹಂಚುತ್ತಿದ್ದಾರೆ.
ಅಲ್ಲದೆ ಇದರಲ್ಲಿ ತಾವು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಜನಮೆಚ್ಚಿದ ಅಭ್ಯರ್ಥಿ ಎಂದೂ ಹೇಳಿಕೊಂಡಿದ್ದಾರೆ.
ಇದೀಗ ಈ ಬೆಳವಣಿಗೆಯ ನಡುವೆ ಜೆಡಿಎಸ್
(ಮೊದಲ ಪುಟದಿಂದ) ಜಿಲ್ಲಾಧ್ಯಕ್ಷರಾದ ಕೆ.ಎಂ. ಗಣೇಶ್ ಅವರು ನಾಪಂಡ ಮುತ್ತಪ್ಪ ಅವರಿಗೆ ಈ ಬಗ್ಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಮಡಿಕೇರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷ ಯಾರನ್ನೂ ಘೋಷಣೆ ಮಾಡಿಲ್ಲ. ಆದರೆ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊAಡು ಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಈ ನಡೆಯಿಂದಾಗಿ ಪಕ್ಷದಲ್ಲಿ ಆಂತರಿಕವಾದ ಬಿಕ್ಕಟ್ಟು ಸೃಷ್ಟಿಯೊಂದಿಗೆ ಕಾರ್ಯಕರ್ತರಲ್ಲಿ ಗೊಂದಲಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಿದ ದಿನಾಂಕದಿAದ ೭ ದಿವಸದೊಳಗೆ ಸೂಕ್ತ ಸಮಜಾಯಿಷಿಕೆಯನ್ನು ನೀಡಬೇಕು. ತಪ್ಪಿದಲ್ಲಿ ರಾಜ್ಯ ವರಿಷ್ಠರಿಗೆ ದೂರು ನೀಡಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧ್ಯಕ್ಷ ಗಣೇಶ್ ಅವರು ನೋಟೀಸ್‌ನಲ್ಲಿ ತಿಳಿಸಿದ್ದಾರೆ.