*ಗೋಣಿಕೊಪ್ಪ, ಜ. ೨೩: ದಲಿತ ಹಾಗೂ ಬುಡಕಟ್ಟು ಸಮುದಾಯದ ಮುಖಂಡರುಗಳು ತಮ್ಮ ಸಂಸ್ಕöÈತಿ ಮತ್ತು ಆಚಾರ, ವಿಚಾರ ಕಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತಾಂತರ ಹೊಂದುವುದನ್ನು ತಡೆಯಲು ಸಮುದಾಯದವರ ಮನವೊಲಿಸುವ ಪ್ರಯತ್ನ ನಡೆಸಿ ಭಾರತದ ಪರಂಪರೆಯ ಚರಿತ್ರೆ ಮತ್ತು ಸಂಸ್ಕöÈತಿ ಯನ್ನು ಕಾಪಾಡಿಕೊಳ್ಳಬೇಕೆಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.
ಕೈಕೇರಿ ಭಗವತಿ ದೇವಸ್ಥಾನದ ಸಮೀಪದ ಎಸ್.ಸಿ. ಕಾಲೋನಿಯ ಸಂಪರ್ಕ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ತನ್ನದೇ ಆದ ಪಾರಂಪರಿಕ ಹಿನ್ನೆಲೆ ಯನ್ನು ಹೊಂದಿರುವ ಸಮುದಾಯ ದವರು ತಮ್ಮ ಆಚಾರ ವಿಚಾರಗಳನ್ನು ಮರೆತು ಆಮಿಷಗಳಿಗೆ ಬಲಿಯಾಗಿ ಮತಾಂತರ ಹೊಂದುತ್ತಿರುವುದು ಭಾರತದ ಪಾರಂಪರಿಕ ಹಿನ್ನೆಲೆಗೆ ಬಹುದೊಡ್ಡ ಆಘಾತವಾಗಿದೆ. ತಮ್ಮ ಧರ್ಮದಲ್ಲಿ ಉಳಿದು ಹಿಂದೂ ರಾಷ್ಟçದ ಬೆಳವಣಿಗೆಗೆ ಪೂರಕವಾಗ ಬೇಕು ಎಂದು ಹೇಳಿದರು.
ಈ ಸಂದರ್ಭ ಹಾತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ, ಉಪಾಧ್ಯಕ್ಷÀ ರೇಖಾ ಬಾಬು, ಸದಸ್ಯರುಗಳಾದ ಜಮ್ಮಡ ಲವ ಭೀಮಯ್ಯ, ನಮಿತ ಕೆ ಬಿ, ವಿಷ್ಮ ವಿ ಎಲ್, ತಾಲೂಕು ಎಸ್.ಟಿ ಮೋರ್ಚಾ ಅಧ್ಯಕ್ಷ ಮುತ್ತುರಾಜ್ ಪಿ.ಎ, ಬೂತ್ ಅಧ್ಯಕ್ಷ ಕುಪ್ಪಂಡ ಕೃಷ್ಣ, ಪಡಿಕಲ್ ಯಾದವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಎಂ. ಪೂವಯ್ಯ, ಕೊಕ್ಕಂಡ ಕುಶ, ಮಾಜಿ ಆರ್ಎಂಸಿ ಸದಸ್ಯ ಚೀಯಕಪೂವಂಡ ಕಿಶನ್ ಸುಬ್ರಮಣಿ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ನವೀನ್, ಗುತ್ತಿಗೆದಾರ ನಾಮೇರ ನವೀನ್, ಶಾಸಕರ ಆಪ್ತ ಕಾರ್ಯದರ್ಶಿ ಮಧುದೇವಯ್ಯ ಮತ್ತು ಪಕ್ಷದ ಕಾರ್ಯಕರ್ತರು, ವಿವಿಧ ಮೋರ್ಚಾಗಳ ಸದಸ್ಯರು, ಮುಖಂಡರು ಇದ್ದರು.