ಸೋಮವಾರಪೇಟೆ, ಜ. ೨೩ : ಭಾರತೀಯ ಜನತಾ ಪಾರ್ಟಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆಯಿತು.
ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೆರಳಿ, ಭಾರತೀಯ ಜನತಾ ಪಾರ್ಟಿಗೆ ಆನ್ಲೈನ್ ಮೂಲಕ ನೋಂದಣಿಯಾಗಿ ಸದಸ್ಯತ್ವ ಪಡೆಯುವಂತೆ ಮಾಲೀಕರು ಹಾಗೂ ಸಿಬ್ಬಂದಿಗಳಿಗೆ ಮನವಿ ಮಾಡಿದರು.
ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಮುಖಂಡರುಗಳಾದ ಎಸ್.ಜಿ. ಮೇದಪ್ಪ, ಬಿ.ಬಿ. ಭಾರತೀಶ್, ಹೆಚ್.ಕೆ. ಮಾದಪ್ಪ, ಮಹೇಶ್ ತಿಮ್ಮಯ್ಯ, ಎಸ್.ಆರ್. ಸೋಮೇಶ್, ಪಿ.ಕೆ. ಚಂದ್ರು, ದರ್ಶನ್ ಜೋಯಪ್ಪ, ಕೆ.ಆರ್. ಮಂಜುಳಾ, ಅಭಿಮನ್ಯುಕುಮಾರ್, ಮಂಜುಳಾ ಸುಬ್ರಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.