ಮಡಿಕೇರಿ, ಜ. ೨೩: ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರೋಗ ಲಕ್ಷಣ ಶಾಸ್ತç ವಿಭಾಗದ ವತಿಯಿಂದ ಗರ್ಭಚೀಲ ಮತ್ತು ಗರ್ಭಕೋಶದ ಕ್ಯಾನ್ಸರ್ ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ನಡೆಯಿತು. ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್, ಮುಖ್ಯ ಆಡಳಿತಾಧಿಕಾರಿ ಸ್ವಾಮಿ ಎ. ಎಲ್. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ರೋಗ ಲಕ್ಷಣ ಶಾಸ್ತç ಮುಖ್ಯಸ್ಥರುಗಳಾದ ಡಾ. ಅನುರಾಧ ಸಿ.ಕೆ ರಾವ್ , ಡಾ ಅನಿತಾ ಪಿ ಜವಲಗಿ, ಡಾ ಗೀತಾ ದೊಪ್ಪ, ಡಾ ಶೀಲಾದೇವಿ ಡಾ ಸುಚಿತ್ರಾ ಎಸ್, ಸಂಸ್ಥೆಯ ವಿಭಾಗದ ಮುಖ್ಯಸ್ಥರುಗಳಾದ ಡಾ. ರಾಮಚಂದ್ರ ಕಾಮತ್ ಮತ್ತು ಡಾ, ಪದ್ಮಜ ಕುಲಕರ್ಣಿರವರುಗಳು ಪ್ಯಾಪ್ ಸ್ಮೆöÊರ್, ಕ್ಯಾನ್ಸರ್, ಪತ್ತೆಹಚ್ಚುವ ಹಾಗೂ ತಡೆಗಟ್ಟುವ ಹಾಗೂ ಇತ್ತೀಚಿನ ಅತ್ಯಾಧುನಿಕಾ ಚಿಕಿತ್ಸಾ ಕ್ರಮಗಳ ಬಗ್ಗೆ ವಿಮರ್ಶೆ ಹಾಗೂ ಅಧ್ಯಯನಗಳ ಕುರಿತು ಚರ್ಚೆ ನಡೆಸಿದರು. ಕಾರ್ಯಕ್ರಮವು ಆನ್ಲೈನ್ ಮತ್ತು ಅಫ್ಲೈನ್ ಮುಖಾಂತರ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಹಲವೆಡೆಗಳಿಂದ ೨೦೦ ಕ್ಕೂ ಹೆಚ್ಚು ವೈದ್ಯರುಗಳು ನೋಂದಣಿ ಮಾಡಿದ್ದರು. ಕಾರ್ಯಕ್ರಮದಲ್ಲಿ ನೋಂದಾಯಿತ ವೈದ್ಯರುಗಳು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕರುಗಳು ಹಾಗೂ ಇತರೆ ವೈದ್ಯಕೀಯ ಕಾಲೇಜಿನ ವೈದ್ಯರುಗಳು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಹಾಜರಿದ್ದರು.