ಗೋಣಿಕೊಪ್ಪಲು, ಜ. ೨೩: ದ. ಕೊಡಗಿನ ಗ್ರಾಮೀಣ ಭಾಗದಲ್ಲಿ ಹಲವು ಹಿರಿಯರ ಚಿಂತನೆಯಲ್ಲಿ ಪ್ರಾರಂಭಗೊAಡ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಅನುಕೂಲಕ್ಕಾಗಿ ಪೊನ್ನಪ್ಪಸಂತೆ ಪಟ್ಟಣದಲ್ಲಿ ೬೪ ಲಕ್ಷದ ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಬ್ಯಾಂಕ್ ಆರಂಭಿಸಲು ಕಾರ್ಯೋನ್ಮುಖವಾಗಿದೆ.

೧೯೫೭ರಲ್ಲಿ ಅಸ್ತಿತ್ವಕ್ಕೆ ಬಂದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೧೭೦೧ ಸದಸ್ಯರನ್ನು ಹೊಂದಿದ್ದು ಸದಸ್ಯರ ಪಾಲು ಬಂಡವಾಳದಿAದ ಸಂಘವು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ ಸೇವೆ ಸಲ್ಲಿಸುತ್ತಿದ್ದು ಉತ್ತಮ ಆಡಳಿತ ಮಂಡಳಿಯನ್ನು ಹೊಂದಿದೆ. ಪೊನ್ನಪ್ಪಸಂತೆ ಸುತ್ತಮುತ್ತಲಿನ ರೈತರ ಅನುಕೂಲಕ್ಕಾಗಿ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಭಾಗದಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು ೪೦ ಲಕ್ಷ ಹಣವನ್ನು ನಬಾರ್ಡ್ನಿಂದ ಸಾಲವಾಗಿ ಪಡೆದಿದೆ.

ಉಳಿದ ಹಣವನ್ನು ಸಂಘದ ಪಾಲು ಬಂಡವಾಳದಿAದ ಭರಿಸಿಕೊಂಡಿರುವ ಆಡಳಿತ ಮಂಡಳಿಯು ಪೊನ್ನಪ್ಪಸಂತೆ ಭಾಗದಲ್ಲಿರುವ ರೈತರಿಗೆ ದಿನನಿತ್ಯ ಬ್ಯಾಂಕಿನ ವ್ಯವಹಾರ ನಡೆಸಲು ಅನುಕೂಲವಾಗುವಂತೆ ನೂತನ ಶಾಖೆಯನ್ನು ಆರಂಭಿಸಲಿದೆ. ಈಗಾಗಲೇ ವಾಣಿಜ್ಯ ಸಂಕೀರ್ಣದಲ್ಲಿ ಹತ್ಯಾರು ವಿಭಾಗ, ದಾಸ್ತಾನು ಕೊಠಡಿ, ರಸಗೊಬ್ಬರ ಕೊಠಡಿ ಸೇರಿದಂತೆ ೪ ಬೃಹತ್ ಕೊಠಡಿಗಳನ್ನು ಪಟ್ಟಣದ ಹೃದಯ ಭಾಗದಲ್ಲಿ ಬ್ಯಾಂಕಿನ ಸ್ವಂತ ನಿವೇಶನದಲ್ಲಿ ನಿರ್ಮಿಸಲಾಗಿದೆ.

ಒಟ್ಟು ೬೪ ಲಕ್ಷವನ್ನು ನೂತನ ವಾಣಿಜ್ಯ ಸಂಕೀರ್ಣಕ್ಕೆ ಆಡಳಿತ ಮಂಡಳಿಯು ಗ್ರಾಹಕರ ಅನುಕೂಲಕ್ಕಾಗಿ

ಕಳೆದ ೧೫ ವರ್ಷಗಳಿಂದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವೆ, ಪೊನ್ನಪ್ಪಸಂತೆ ಪಟ್ಟಣದಲ್ಲಿ ನೂತನ ಶಾಖೆ ಆರಂಭವಾಗುವುದರಿAದ ಸ್ಥಳೀಯರಿಗೆ ಈ ಭಾಗದಲ್ಲಿ ಅನುಕೂಲವಾಗಲಿದೆ. ೬೪ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡವು ನಿರ್ಮಾಣವಾಗಿದ್ದು ನಬಾರ್ಡ್ನಿಂದ ಸಹಾಯ ಪಡೆಯಲಾಗಿದೆ. ೪ ಮಳಿಗೆಗಳು ಕೆಲಸ ನಿರ್ವಹಿಸಲಿವೆ. ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಸಂಘದ ವತಿಯಿಂದ ಕೈಗೊಳ್ಳಲಾಗಿದೆ. ಆಡಳಿತ ಮಂಡಳಿಯ ಸರ್ವ ಸದಸ್ಯರ ಅಭಿಲಾಷೆಯಂತೆ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗಿದ್ದು ಇದರಲ್ಲಿ ಬ್ಯಾಂಕಿನ ನೂತನ ಶಾಖೆಯು ಕಾರ್ಯರಂಭ ಮಾಡಲಿದೆ.

-ಚಿಮ್ಮಣಮಾಡ ಕೃಷ್ಣ ಗಣಪತಿ, ಅಧ್ಯಕ್ಷರು ಬಾಳೆಲೆ ಫ್ಯಾಕ್ಸ್