ಸ್ಪಾಟಿಪೈನ ಶೇ. ೬ ರಷ್ಟು ಉದ್ಯೋಗಿಗಳು ವಜಾ
ನವದೆಹಲಿ, ಜ. ೨೩: ಮ್ಯೂಸಿಕ್ ಸ್ಟಿçÃಮಿಂಗ್ ಸಂಸ್ಥೆ ಸ್ಪಾಟಿಪೈ ಟೆಕ್ನಾಲಜಿ ತನ್ನ ಸಿಬ್ಬಂದಿಯ ಶೇ. ೬ ರಷ್ಟು ಅಂದರೆ ಸರಿಸುಮಾರು ೬೦೦ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದರೊಂದಿಗೆ ಇತ್ತೀಚಿಗೆ ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್, ಮೆಟಾ ಫ್ಲಾಟ್ ಫಾರ್ಮ್ ನಂತಹ ಕಂಪೆನಿಗಳೊAದಿಗೆ ಸ್ಪಾಟಿಫೈ ಸಂಸ್ಥೆಯೂ ಸೇರುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ತನ್ನ ಗಿಮ್ಲೆಟ್ ಮೀಡಿಯಾ ಮತ್ತು ಪಾರ್ಕಾಸ್ಟ್ ಪಾಡ್ಕಾಸ್ಟ್ ಸ್ಟುಡಿಯೋಗಳಿಂದ ೩೮ ಸಿಬ್ಬಂದಿಯನ್ನು ಸ್ಪಾಟಿಫೈ ವಜಾಗೊಳಿಸಿತ್ತು. ಸಂಗೀತ-ಸ್ಟಿçÃಮಿAಗ್ ದೈತ್ಯ ಸ್ಪಾಟಿಫೈ ಸುಮಾರು ೯,೮೦೦ ಉದ್ಯೋಗಿಗಳನ್ನು ಹೊಂದಿದೆ. ವಿಶಾಲವಾದ ಜಾಗತಿಕ ವ್ಯಾಪಾರ ಮತ್ತು ಜಾಹೀರಾತುಗಳಲ್ಲಿನ ನಿಧಾನಗತಿಯ ಆದಾಯ ಸಂಗ್ರಹ ಕಾರಣದಿಂದ ನಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಶೇ. ೬ ರಷ್ಟು ಕಡಿಮೆಗೊಳಿಸುತ್ತಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಾಹಕ ಡೇನಿಯಲ್ ಏಕ್ ಸ್ಪಾಟಿಫೈ ತನ್ನ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್ನಲ್ಲಿ ತಿಳಿಸಿದ್ದಾರೆ.
ಭಗತ್ ಸಿಂಗ್ ಕೋಶ್ಯಾರಿ ರಾಜೀನಾಮೆ ಸಾಧ್ಯತೆ
ಮುಂಬೈ, ಜ. ೨೩: ಮಹಾರಾಷ್ಟç ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಶೀಘ್ರದಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಮುಂದಿನ ಬದುಕನ್ನು ಓದು ಬರಹದಲ್ಲಿಯೇ ಕಳೆಯಬೇಕು ಎಂದು ಇಚ್ಛಿಸಿದ್ದು ಎಲ್ಲಾ ರೀತಿಯ ರಾಜಕೀಯ ಜವಾಬ್ದಾರಿಗಳಿಂದ ಸ್ವಾತಂತ್ರ್ಯವನ್ನು ಬಯಸುತ್ತಿರುವುದಾಗಿ ಹೇಳಿದ್ದಾರೆ. ಮಹಾರಾಷ್ಟçದ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ಅತ್ಯಂತ ಗೌರವದ ಸಂಗತಿ. ಸಂತರು ಮತ್ತು ಸಮಾಜ ಸೇವಕರ ನಾಡು ಈ ಮಹಾರಾಷ್ಟç. ಕಳೆದ ಮೂರು ವರ್ಷಗಳಲ್ಲಿ ಮಹಾರಾಷ್ಟçದ ಜನರಿಂದ ನಾನು ಪಡೆದ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಆಶಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಕೋಶ್ಯಾರಿ ತಿಳಿಸಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆ.ಎಲ್. ರಾಹುಲ್
ಮುಂಬೈ, ಜ. ೨೩: ಕ್ರಿಕೆಟಿಗ ಕೆ.ಎಲ್. ರಾಹುಲ್ ಅವರು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಮುಂಬೈನ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಕೆ.ಎಲ್. ರಾಹುಲ್ ಮತ್ತು ಅಥಿಯಾ ಶೆಟ್ಟಿ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ಲೈನ್ ಮ್ಯಾನ್ ಸಾವು
ಬೆಂಗಳೂರು, ಜ. ೨೩: ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯದ ವೇಳೆ ಕರೆಂಟ್ ಶಾಕ್ ಹೊಡೆದು ಲೈನ್ಮ್ಯಾನ್ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರದಲ್ಲಿ ನಡೆದಿದೆ. ೩೨ ವರ್ಷದ ಗೌತಮ್ ಮೃತ ದುರ್ದೈವಿಯಾಗಿದ್ದಾರೆ. ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುತ್ತಿದ್ದಾಗ ಗೌತಮ್ ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು
ಬೆಂಗಳೂರು, ಜ. ೨೩: ತಮ್ಮ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದು, ತಾ. ೨೪ ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ವೇತನ ಹೆಚ್ಚಳ, ವಜಾಗೊಂಡ ನೌಕರರನ್ನು ಮರು ಸೇರ್ಪಡೆಗೊಳಿಸುವುದು ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಎಸ್ಆರ್ಟಿಸಿ ಮತ್ತು ಎನ್ಡಬ್ಲ್ಯುಕೆಎಸ್ಆರ್ಟಿಸಿ ನೌಕರರು ತಾ. ೨೪ ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಂಡಳಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಹಾಗೂ ಇತರೆ ಸಂಘಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ. ಆದರೆ, ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಒಕ್ಕೂಟಗಳು ಸ್ಪಷ್ಟಪಡಿಸಿವೆ. ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡುತ್ತಲೇ ಬಂದಿದ್ದೇವೆ. ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಹಲವು ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ನಮ್ಮ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೆಎಸ್ಆರ್ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಹೆ.ವಿ. ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಪ್ರಮುಖ ನಗರಗಳು ಕತ್ತಲಲ್ಲಿ
ಇಸ್ಲಾಮಾಬಾದ್, ಜ. ೨೩: ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಪಾಕಿಸ್ತಾನ ಇದೀಗ ನಿಜಕ್ಕೂ ಕತ್ತಲಲ್ಲಿ ಮುಳುಗಿದೆ. ಮೊದಲು ದೇಶದಲ್ಲಿ ಗೋದಿ ಹಿಟ್ಟು ಖಾಲಿಯಾಯಿತು. ನಂತರ ಗ್ಯಾಸ್ ಮತ್ತು ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಈಗ ವಿದ್ಯುತ್ ಸರದಿ. ಸೋಮವಾರ ಬೆಳಗ್ಗೆಯಿಂದಲೇ ಪಾಕಿಸ್ತಾನದ ಬಹುಭಾಗ ಕತ್ತಲೆಯಲ್ಲಿ ಮುಳುಗಿದೆ. ಕ್ವೆಟ್ಟಾ ಮತ್ತು ಗುಡ್ಡು ನಡುವಿನ ಹೈ-ಟೆನ್ಷನ್ ಟ್ರಾನ್ಸ್ಮಿಷನ್ ಲೈನ್ನಲ್ಲಿನ ದೋಷದಿಂದಾಗಿ ಸೋಮವಾರ ದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಿದೆ. ಪಾಕಿಸ್ತಾನ ಈಗಾಗಲೇ ವಿದ್ಯುತ್ ಕೊರತೆ ಮತ್ತು ದೀರ್ಘ ಕಡಿತವನ್ನು ಎದುರಿಸುತ್ತಿದೆ. ವಿದ್ಯುತ್ ಉಳಿತಾಯಕ್ಕಾಗಿ ಮಾರುಕಟ್ಟೆಗಳನ್ನು ೮ ಗಂಟೆಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕ್ವೆಟ್ಟಾ, ಇಸ್ಲಾಮಾಬಾದ್, ಲಾಹೋರ್ ಸೇರಿದಂತೆ ಬಲೂಚಿಸ್ತಾನದ ೨೨ ಜಿಲ್ಲೆಗಳು, ಮುಲ್ತಾನ್ ಪ್ರದೇಶದ ನಗರಗಳು ಮತ್ತು ಕರಾಚಿಯಂತಹ ಹಲವು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಲಾಹೋರ್ನ ಮಾಲ್ ರೋಡ್, ಕೆನಾಲ್ ರಸ್ತೆ ಮತ್ತು ಇತರ ಪ್ರದೇಶಗಳಲ್ಲಿ ಜನರು ವಿದ್ಯುತ್ ಕಡಿತದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯದಿಂದ ಮೆಟ್ರೋ ಸೇವೆಗೂ ತೊಂದರೆಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.