ಮಡಿಕೇರಿ, ಜ. ೨೩: ಕೊಡವ ಕ್ರೀಯೆಷನ್ಸ್ ಸಂಘಟನೆಯ ವತಿಯಿಂದ ಹಿರಿಯ ಕೊಡವ ಸಾಹಿತಿ ದಿ. ಮುಲ್ಲೆರ ಜಿಮ್ಮಿ ಅಯ್ಯಪ್ಪ ಅವರ ಸ್ಮರಣಾರ್ಥ ಆನ್‌ಲೈನ್ ಗಾಯನ ಪೈಪೋಟಿ ಏರ್ಪಡಿಸಲಾಗಿದೆ.

ಈ ಗಾಯನ ಪೈಪೋಟಿಯು ೫ ರಿಂದ ೧೬ ವಯಸ್ಸಿನ ಅಂತರದಲ್ಲಿ ಹಾಗೂ ೧೭ ವರ್ಷ ಮೇಲ್ಪಟ್ಟವರೆಂದು ಎರಡು ವಿಭಾಗದಲ್ಲಿ ನಡೆಯಲಿದ್ದು, ೫ ರಿಂದ ೧೬ ವಯಸ್ಸಿಗೊಳಪಟ್ಟವರ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ. ೧೫೦೦, ದ್ವಿತೀಯ ರೂ. ೧೦೦೦, ತೃತೀಯ ರೂ. ೫೦೦.

೧೭ ವರ್ಷ ಮೇಲ್ಪಟ್ಟವರ ಸ್ಪರ್ಧೆಯ ವಿಜೇತರಿಗೆ ಪ್ರಥಮ ರೂ. ೨೦೦೦, ದ್ವಿತೀಯ ರೂ. ೧೫೦೦, ತೃತೀಯ ರೂ. ೧೦೦೦ ನಗದು ಹಾಗೂ ಪಾರಿತೋಷಕವನ್ನು ನೀಡಲಾಗುವುದು.

ಈ ಸ್ಪರ್ಧೆಯಲ್ಲಿ ಮುಲ್ಲೆರ ಜಿಮ್ಮಿ ಅಯ್ಯಪ್ಪ ಅವರ ರಚಿಸಿರುವ ಹಾಡನ್ನು ಮಾತ್ರ ಗಾಯನಕ್ಕೆ ಬಳಸಿಕೊಳ್ಳಬಹುದು. ೫-೧೬ ವಯಸ್ಸಿನೊಳಗಿನವರ ಒಂದು ವಿಭಾಗ, ೧೭ ವಯಸ್ಸಿಗೆ ಮೇಲ್ಪಟ್ಟವರ ಮತ್ತೊಂದು ವಿಭಾಗದಲ್ಲಿ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.

ಹಾಡನ್ನು ೨.೩೦ ನಿಮಿಷದೊಳಗೆ ಮುಗಿಸಬೇಕು. ಯಾವುದೇ ಕರೋಕೆ, ಮ್ಯೂಸಿಕ್, ಆ್ಯಪ್ (ಂಠಿಠಿ) ಬಳಸದೆ, ಎಡಿಟಿಂಗ್ ಮಾಡದೆ ಹಾಡಿದ ಹಾಡಿನ ವೀಡಿಯೋ ಮಾಡಿ ಕಳುಹಿಸಬೇಕು. ಹಾಡಿನ ವೀಡಿಯೋ ಕಳುಹಿಸಲು ಜ. ೩೦ ಕೊನೆಯ ದಿನವಾಗಿದೆ. ಹಾಡಿನ ವೀಡಿಯೋ ಕಳುಹಿಸಬೇಕಾದ ವಾಟ್ಸಪ್ ನಂಬರ್: ೯೫೩೫೦೭೮೧೦೦.ಹೆಚ್ಚಿನ ಮಾಹಿತಿಗಾಗಿ ಪುಟ್ಟಂಗಡ ದೀಕ್ಷಿತ್ ಅಯ್ಯಪ್ಪ - ೯೧೪೧೮ ೦೯೫೪೯, ಮತ್ರಂಡ ಹರ್ಷಿತ್ ಪೂವಯ್ಯ-೯೪೮೨೨ ೬೯೫೫೬, ಬೂವಕಂಡ ಅಪ್ಪಚು-೮೨೭೭೩ ೦೩೭೯೧, ಪೆಮ್ಮಂಡ ಸಚಿನ್ ಅಪ್ಪಣ್ಣ-೯೬೮೬೨ ೯೧೨೨೧, ನಾಯಕಂಡ ಮದನ್ ಬೋಪಯ್ಯ-೯೭೩೧೫ ೨೩೧೨೭ ಇವರನ್ನು ಸಂಪರ್ಕಿಸಬಹುದು.