ಗೋಣಿಕೊಪ್ಪಲು, ಜ. ೨೨ : ಸರಣಿ ಅಪಘಾತವೊಂದರಲ್ಲಿ ೧೨ ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಗೋಣಿಕೊಪ್ಪ ಸಮೀಪದ ಹಾತೂರು ಬಳಿಯ ಮುಖ್ಯ ರಸ್ತೆಯಲ್ಲಿ ಭಾನುವಾರ ಮುಂಜಾನೆ ವೇಳೆ ನಡೆದಿದೆ.
ಮುಂಜಾನೆಯ ವೇಳೆ ವೀರಾಜಪೇಟೆಯಿಂದ ಬೆಂಗಳೂರಿನತ್ತ ಹೊರಟ ಟೆಂಪೋ ಟ್ರಾಕ್ ವಾಹನ ಹಾತೂರು ಬಳಿ ಸಾಗುತ್ತಿದ್ದಂತೆಯೇ ಅಪ್ಪಳಿಸಿದೆ. ನಂತರ ಹನಗೋಡು ಭಾಗದಿಂದ ವೀರಾಜಪೇಟೆಗೆ ಕಾಫಿ ಕೆಲಸಕ್ಕೆ ತೆರಳುತ್ತಿದ್ದ ಖಲೀಲ್ ಪಾಷಾ ಎಂಬವರು ಚಾಲಿಸುತ್ತಿದ್ದ ಟೆಂಪೋ ಟ್ರಾಕ್ ವ್ಯಾನ್ಗೆ ಅಪ್ಪಳಿಸಿದೆ. ಇದರಿಂದ ಟೆಂಪೋ ಟ್ರಾಕ್ ಮಗುಚಿಕೊಂಡಿದೆ. ಅದರಲ್ಲಿದ್ದ ೧೨ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮಾಹಿತಿ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ದೀಕ್ಷಿತ್ ಕುಮಾರ್ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಕಾರಣ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ.