ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ೩ ಸಾವಿರ ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಿದ ಪೊಲೀಸರು
ನವದೆಹಲಿ, ಜ. ೨೨: ದೆಹಲಿಯಲ್ಲಿ ಲಿವ್ ಇನ್ ಪಾರ್ಟ್ನರ್ ಶ್ರದ್ದಾ ವಾಕರ್ ಹತ್ಯೆಗೈದು ಆಕೆಯ ದೇಹವನ್ನು ೩೫ ತುಂಡುಗಳಾಗಿ ಕತ್ತರಿಸಿ ಹಾಕಿದ ಭೀಕರ ಘಟನೆಯ ಆರೋಪಿ ಆಫ್ತಾಬ್ ಅಮೀನ್ ಪೂನವಾಲಾ ವಿರುದ್ಧ ದೆಹಲಿ ಪೊಲೀಸರು ೩,೦೦೦ ಪುಟಗಳ ಚಾರ್ಜ್ಶೀಟ್ನ್ನು ಸಿದ್ಧಪಡಿಸಿದ್ದಾರೆ. ಮೂಲಗಳ ಪ್ರಕಾರ, ೧೦೦ ಸಾಕ್ಷಿಗಳನ್ನು ಹೊರತುಪಡಿಸಿ, ೩,೦೦೦ಕ್ಕೂ ಹೆಚ್ಚು ಪುಟಗಳ ಕರಡು ಚಾರ್ಜ್ ಶೀಟ್ಗೆ ಫೋರೆನ್ಸಿಕ್ ಮತ್ತು ಎಲೆಕ್ಟಾçನಿಕ್ ಸಾಕ್ಷö್ಯಗಳನ್ನು ಆಧಾರವಾಗಿ ಮಾಡಲಾಗಿದೆ. ಜನವರಿ ಅಂತ್ಯದೊಳಗೆ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ದೆಹಲಿ ಪೊಲೀಸರು ಸಿದ್ಧಪಡಿಸಿರುವ ಚಾರ್ಜ್ಶೀಟ್ ಕರಡನ್ನು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆ. ಕಳೆದ ವರ್ಷ ಮೇ ೧೮ ರಂದು ಆರೋಪಿ ಅಫ್ತಾಬ್ ಪೂನವಾಲಾ ದೆಹಲಿಯ ಛತ್ತರ್ಪುರ ಪ್ರದೇಶದಲ್ಲಿ ಶ್ರದ್ಧಾ ವಾಕರ್ಳನ್ನು ಕತ್ತು ಹಿಸುಕಿ ಕೊಂದು ಹಾಕಿದ್ದನು. ನಂತರ ದೇಹವನ್ನು ಹಲವು ತುಂಡುಗಳಾಗಿ ಮಾಡಿ ಕೆಲವು ದಿನ ಫ್ರಿಡ್ಜ್ ನೊಳಗೆ ಇಟ್ಟಿದ್ದನು. ಛತ್ತರ್ಪುರದ ಅರಣ್ಯದಿಂದ ಪತ್ತೆಯಾಗಿರುವ ಮೂಳೆಗಳು ಮತ್ತು ಅವುಗಳ ಡಿಎನ್ಎ ವರದಿಯು ಶ್ರದ್ಧಾ ಅವರ ಮೂಳೆಗಳು ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಪತ್ನಿ ಜೊತೆ ಅಕ್ರಮ ಸಂಬAಧ: ಯುವಕನ ದಾರುಣ ಹತ್ಯೆ
ನವದೆಹಲಿ, ಜ. ೨೨: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಮತ್ತು ದೇಹ ತುಂಡರಿಸಿದ ಘಟನೆ ಹಸಿರಾಗಿರುವಂತೆಯೇ ಇತ್ತ ಉತ್ತರ ಪ್ರದೇಶದಲ್ಲಿ ಇಂತಹುದೇ ಮತ್ತೊಂದು ಘಟನೆ ವರದಿಯಾಗಿದೆ. ಪತ್ನಿ ಜೊತೆ ಅಕ್ರಮ ಸಂಬAಧ ಹೊಂದಿದ ಆರೋಪದ ಮೇರೆಗೆ ವ್ಯಕ್ತಿಯೋರ್ವ ಯುವಕನನ್ನು ಕೊಂದು ದೇಹವನ್ನು ೧೨ ತುಂಡುಗಳಾಗಿ ಕತ್ತರಿಸಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಗಾಜಿಯಾಬಾದ್ ನಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಮೃತ ದೇಹವನ್ನು ೧೨ ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿ ನದಿ ದಡದಲ್ಲಿ ಎಸೆದು ಪರಾರಿಯಾಗಿದ್ದ. ಆರೋಪಿ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಕೊಲೆಯಲ್ಲಿ ರಿಕ್ಷಾ ಚಾಲಕನ ಸಂಬAಧಿಯೂ ಭಾಗಿಯಾಗಿದ್ದಾನೆ ಎಂದು ಹೇಳಲಾಗಿದೆ. ಮೃತನನ್ನು ಅಕ್ಷಯ್ ಎಂದು ಗುರುತಿಸಲಾಗಿದ್ದು, ಅಕ್ಷಯ್ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬAಧ ಹೊಂದಿದ್ದ ಎಂದು ಆರೋಪಿ ಮಿಲಾಲ್ ಹೇಳಿದ್ದಾನೆ.
ಸಿಎಂ ಹಾಗೂ ಸ್ವಪಕ್ಷೀಯರ ವಿರುದ್ಧ ಗರಂ
ಹಾಸನ, ಜ. ೨೨: ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪಕ್ಷದ ನಾಯಕರ ವಿರುದ್ಧವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರು ಜೆಡಿ(ಎಸ್) ಹಾಗೂ ಬಿಜೆಪಿ ನಾಯಕರನ್ನು ಟೀಕಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಸನದಲ್ಲಿ ನಡೆದ ಪಕ್ಷದ ಪ್ರಜಾ ಧ್ವನಿ ಯಾತ್ರೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರ ವೈಫಲ್ಯಗಳು ಹಾಗೂ ಅಕ್ರಮಗಳು ತಿಳಿದಿದ್ದರೂ ಬಹುತೇಕ ಕಾಂಗ್ರೆಸ್ ನಾಯಕರು ಸಾರ್ವಜನಿಕ ರ್ಯಾಲಿಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ೩೫ ನಿಮಿಷಗಳ ಭಾಷಣದಲ್ಲಿ ಸಿದ್ದರಾಮಯ್ಯ ನಿರಂತರವಾಗಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನು ಟೀಕಿಸಿದರು. ತಾವು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ಥಗಿತಗೊಳಿಸಿದ್ದಾರೆ. ಬಿಜೆಪಿ ಬಡವರ, ರೈತ, ಯುವಕರು, ಮಹಿಳೆಯರು, ಕಾರ್ಮಿಕರು, ದಲಿತರ ವಿರೋಧಿ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಂದುವರೆಸದ ಬೊಮ್ಮಾಯಿ ಸರ್ಕಾರಕ್ಕೆ "ನಿನ್ನ ಮನೆ ಹಾಳಾಗ" ಎಂದು ಶಪಿಸಿದ್ದು, ಶ್ರೀಮಂತ ಜನರ ಪರವಾಗಿ ಬಿಜೆಪಿ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ ಎಂದು ಆರೋಪಿಸಿದ್ದಾರೆ.
ಗಾಯಕಿ ಮಂಗ್ಲಿ ಕಾರಿನ ಮೇಲೆ ಕಲ್ಲು ತೂರಾಟ
ಬಳ್ಳಾರಿ, ಜ. ೨೨: ತೆಲುಗು ಮೂಲದ ಇತ್ತೀಚೆಗೆ ಕನ್ನಡದಲ್ಲಿಯೂ ಖ್ಯಾತಿಗಳಿಸುತ್ತಿರುವ ಗಾಯಕಿ ಮಂಗ್ಲಿ ಕಾರಿನ ಮೇಲೆ ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಲ್ಲು ತೂರಾಟ ನಡೆದಿದ್ದು, ನಿನ್ನೆ ರಾತ್ರಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬಳ್ಳಾರಿ ಉತ್ಸವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಬಳ್ಳಾರಿ ಉತ್ಸವದಲ್ಲಿ ಹಾಡಲೆಂದು ಸಿಂಗರ್ ಮಂಗ್ಲಿ ಬಂದಿದ್ದರು. ಉತ್ಸವದಲ್ಲಿ ಹಾಡು ಮುಗಿಸಿ ವೇದಿಕೆಯ ಹಿಂಭಾಗಕ್ಕೆ ಹೋಗುವಾಗ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು. ವಿಶೇಷವಾಗಿ ಯುವಕರ ದಂಡು ಮಂಗ್ಲಿ ಅವರನ್ನು ಕಾಣಲು ಮುಗಿಬಿದ್ದಿತ್ತು. ವೇದಿಕೆ ಹಿಂಭಾಗದಲ್ಲಿದ್ದ ಮೇಕಪ್ ಟೆಂಟ್ಗೂ ಯುವಕರು ನುಗ್ಗಿ ಬಂದಿದ್ದರು. ಈ ರೀತಿ ಯುವಕರು ನುಗ್ಗಿ ಬಂದ ಕೂಡಲೇ ಅಲ್ಲಿ ಗದ್ದಲವುಂಟಾಯಿತು. ಆಗ ಪೊಲೀಸರು ಧಾವಿಸಿ ಯುವಕರಿಗೆ ಲಘು ಲಾಟಿ ಪ್ರಹಾರ ಮಾಡಿದ್ದಾರೆ. ಕೊನೆಗೆ ಮಂಗ್ಲಿಯವರು ತಮ್ಮ ಕಾರಿಗೆ ಹತ್ತಿ ಅಲ್ಲಿಂದ ಹೊರಟು ಹೋಗುವಾಗ ಪುಂಡರು ಅವರ ಕಾರಿಗೆ ಕಲ್ಲೆಸೆದಿದ್ದಾರೆ. ಕಲ್ಲು ಎಸೆದ ರಭಸಕ್ಕೆ ಕಾರಿನ ಗ್ಲಾಸುಗಳು ಪುಡಿಯಾಗಿವೆ. ಇತ್ತೀಚೆಗೆ ಮಂಗ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಹಾಡಲು ಬಂದಿದ್ದರು. ಆಗ ಮಂಗ್ಲಿಯವರನ್ನು ನಿರೂಪಕಿ ಅನುಶ್ರೀ ಕನ್ನಡದಲ್ಲಿ ನಾಲ್ಕು ಸಾಲು ಮಾತನಾಡಿ ಎಂದು ಕೇಳಿದ್ದಕ್ಕೆ ಕನ್ನಡದಲ್ಲಿ ಯಾಕೆ ಮಾತನಾಡಬೇಕು, ಚಿಕ್ಕಬಳ್ಳಾಪುರ ಜನತೆಗೆ ತೆಲುಗು ಅರ್ಥವಾಗುತ್ತದೆ, ನಾನು ತೆಲುಗಿನಲ್ಲಿಯೇ ಹಾಡುತ್ತೇನೆ, ಮಾತನಾಡುತ್ತೇನೆ ಎಂದಿದ್ದರು. ಅದು ಹಲವು ಕನ್ನಡಿಗರಿಗೆ ಇಷ್ಟವಾಗಿರಲಿಲ್ಲ.
ಅಮೆರಿಕದಲ್ಲಿ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್
ಲಾಸ್ಎಂಜಲೀಸ್, ಜ. ೨೨: ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್ ಸಂಭವಿಸಿದ್ದು, ಈ ವೇಳೆ ಹಲವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್ನಲ್ಲಿ ಈ ಶೂಟೌಟ್ ನಡೆದಿದೆ. ಚೀನೀ ಚಾಂದ್ರಮಾನ ಪದ್ಧತಿಯ ಪ್ರಕಾರ ಅರಂಭವಾಗುವ ಹೊಸವರ್ಷವನ್ನು ಸಂಭ್ರಮಿಸಲು ಈ ವೇಳೆ ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಆಗಂತುಕ ದಾಳಿ ನಡೆಸಿದ್ದಾನೆ. ಲಾಸ್ಏಂಜಲೀಸ್ ನಗರದ ಸಮೀಪ ಇರುವ ಮಾಂಟೆರೆ ಪಾರ್ಕ್ನಲ್ಲಿ ಶನಿವಾರ ರಾತ್ರಿ ಅಪರಿಚಿತ ದುಷ್ಕರ್ಮಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಟ ೧೦ ಮಂದಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.