ಸುಭಾಷ್ ಚಂದ್ರ ಬೋಸ್ ಅವರು ೧೮೯೭ನೇ ಜನವರಿ ೨೩ ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದರು. ಬಾಲ್ಯದಲ್ಲಿಯೇ ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಮನಸೋತು ತಮ್ಮ ಪದವಿಯ ನಂತರ ಇಂಗ್ಲೆAಡ್ನಲ್ಲಿ ಐ.ಸಿ.ಎಸ್. ಪದವಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ವಿದೇಶಿ ನೌಕರಿಯನ್ನು ತಿರಸ್ಕರಿಸಿದ ನಂತರ ಮಹಾತ್ಮಾ ಗಾಂಧೀಜಿಯವರನ್ನು ಭೇಟಿ ಮಾಡಿ ದೇಶದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ತೊಡಗಿಸಿ ಕೊಂಡಿದ್ದಲ್ಲದೆ, ಭಾರತದ ಅಪ್ರತಿಮ ಹೋರಾಟಗಾರರಾಗಿ ಎಲ್ಲರ ಮನಸ್ಸಲ್ಲೂ ಅಚ್ಚಳಿಯದೆ ಉಳಿದಿದ್ದಾರೆ.
ನೇತಾಜಿ ಅವರು ಸ್ವಾತಂತ್ರö್ಯ ಸಂಗ್ರಾಮದಲ್ಲಿ ‘ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರö್ಯ ಕೊಡುತ್ತೇನೆ’ ಎಂದು ಕರೆ ನೀಡುವ ಮೂಲಕ ಅದೆಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿದರಲ್ಲದೆ, ಸಿಡಿಲಬ್ಬರದ ಮಾತುಗಳಿಂದ ದೇಶದ ಪ್ರತಿಯೊಬ್ಬ ನಾಗರಿಕರಲ್ಲೂ ದೇಶ ಪ್ರೇಮ ಹುಟ್ಟಿಸಿ ಎಲ್ಲರನ್ನೂ ಜಾಗೃತಿಗೊಳಿಸಿದರು.
ಭಾರತೀಯ ರಾಷ್ಟಿçÃಯ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯನಿರ್ವಹಿಸಿದ ಅವರು ಮುಂದೆ ಆಜಾದ್ ಹಿಂದ್ ಫೌಜಿನ ಮೂಲಕ ಭಾರತದ ಸ್ವಾತಂತ್ರö್ಯಕ್ಕಾಗಿ ಹೋರಾಡಿದರು. ೧೯೨೧ ರಿಂದ ೧೯೪೧ ರವರೆಗೆ ೨೦ ವರ್ಷದ ಅವಧಿಯಲ್ಲಿ ಹನ್ನೊಂದು ಬಾರಿ ಅವರನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು. ಆದರೂ ಅವರಲ್ಲಿ ದೇಶಭಕ್ತಿ ಕಡಿಮೆಯಾಗಲಿಲ್ಲ. ಬಂಧನವು ಅವರನ್ನು ಇನ್ನಷ್ಟು ಹೋರಾಟಕ್ಕೆ ಪ್ರೇರೇಪಿಸುವಂತೆ ಮಾಡಿತು.
ಶಸಸ್ತç ಹೋರಾಟಕ್ಕೆ ಅಣಿಯಾಗಿ ಭಾರತದಿಂದ ಕಾಬೂಲ್ ಮಾರ್ಗವಾಗಿ ಜರ್ಮನಿ ತಲುಪಿ, ಹಿಟ್ಲರ್ ಭೇಟಿಯ ನಂತರ ೧೯೪೨ ರಲ್ಲಿ ಆಜಾದ್ ಹಿಂದ್ ಫೌಜಿ ಸ್ಥಾಪಿಸಿದರು. ಸಿಂಗಾಪುರ ಮುಖೇನ ಜಪಾನ್ಗೆ ಬಂದು ಅವರ ಸಹಾಯದೊಂದಿಗೆ ‘ಚಲೋ ಡಿಲ್ಲಿ’ ಘೋಷಣೆಯೊಂದಿಗೆ ಬ್ರಿಟಿಷರಲ್ಲಿ ನಡುಕ ಹುಟ್ಟಿಸಿದರು. ಬ್ರಿಟಿಷರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರೆ ಅತ್ಯಂತ ಭಯ ಮತ್ತು ಆತಂಕ.
ಸ್ವತAತ್ರö್ಯ ಭಾರತದ ಮಣ್ಣಿನ ಮೇಲೆ ಕಾಲಿಟ್ಟ ಐ.ಎನ್.ಎ. ಸೈನಿಕರು ಪುಳಕಿತರಾದರು. ಇತ್ತ ಮಹಾತ್ಮ ಗಾಂಧೀಜಿಯವರು ಭಾರತ ಬಿಟ್ಟು ತೊಲಗಿ ಚಳುವಳಿಗೆ ಕರೆ ನೀಡಬೇಕಾಗಿ ಬಂತು. ಮಹಾ ಯುದ್ಧದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಬ್ರಿಟಿಷರ ಕೈ ಮೇಲಾಗುತ್ತಾ ಬಂತು. ೧೯೪೫ ರಲ್ಲಿ ವಿಮಾನ ಅಪಘಾತದಲ್ಲಿ ಮಡಿದ ವಿಚಾರ ತಿಳಿದು ಭಾರತೀಯರು ಧೃತಿಗೆಟ್ಟರು. ಅವರ ನಿಧನವು ಖಚಿತಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಇದಕ್ಕೆ ಪರಿಶೀಲನಾ ಸಮಿತಿ ನೇಮಕವಾದರೂ ಸಾವನ್ನೊಪ್ಪದ ಅನೇಕ ಜನರು ಬಹಳ ವರ್ಷ ನೇತಾಜಿ ಬದುಕಿದ್ದಾರೆಂದೇ ತಿಳಿದಿದ್ದರು.
ಆ ಸಂದರ್ಭದಲ್ಲಿ ಐ.ಎಸ್.ಐ. ಸೈನಿಕರನ್ನು ಬಂಧಿಸಿ ಅವರ ಮೇಲೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಸಿದ ಕೋರ್ಟ್ ಮಾರ್ಷಲ್ ಜನರನ್ನು ರೊಚ್ಚಿಗೆಬ್ಬಿಸಿತ್ತು. ನಂತರ ಐ.ಎನ್.ಎ. ಮತ್ತು ಸಾವರ್ಕರ್ ಅವರು ಭಾರತೀಯ ನೌಕಾದಳದ ಬಂಡಾಯ ಬ್ರಿಟಿಷರಿಗೆ ಮುಳುವಾಯಿತು. ಇನ್ನು ಭಾರತೀಯರನ್ನು ದಾಸ್ಯದಲ್ಲಿರಿಸುವುದು ಅಸಾಧ್ಯ ಅನ್ನಿಸಿ ೧೯೪೭ ರ ಆಗಸ್ಟ್ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದರು.
ಸದಾ ಭಾರತದ ಸ್ವಾತಂತ್ರö್ಯಕ್ಕಾಗಿ ಹಂಬಲಿಸುತ್ತಿದ್ದ ನೇತಾಜಿ ಅವರು ಹಚ್ಚಿದ ಕ್ರಾಂತಿಯ ಕಿಡಿ ಮಹಾ ಜ್ವಾಲೆಯಾಗಿ ಅನೇಕರು ಸಂಗ್ರಾಮದಲ್ಲಿ ಹೋರಾಡಲು ಪ್ರಚೋದನೆಯಾಯಿತು. ಅವರು ಸೃಷ್ಟಿಸಿದ ಹೋರಾಟದಿಂದಾಗಿ ಇಂದಿಗೂ ಭಾರತೀಯರಿಗೆ ಸ್ಫೂರ್ತಿ ತುಂಬುವ ಧೀರ ನಾಯಕರಾಗಿದ್ದರು. ಅವರೊಬ್ಬ ಅಸಾಧಾರಣ ವ್ಯಕ್ತಿತ್ವದ ಮೇರು ಪುರುಷ. ಭಾರತ ಮಾತೆಯ ವೀರ ಪುತ್ರ. ಈ ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕ.
ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಈ ಭೂಮಿಯಲ್ಲಿಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ. ಅನ್ಯಾಯ ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ ಎಂದು ನೇತಾಜಿ ಹೇಳುತ್ತಿದ್ದರು. ಈ ಮಾತುಗಳನ್ನು ದೇಶದ ಜನರು ನೆನಪಿಸಿಕೊಳ್ಳುವುದು ಅತೀ ಅವಶ್ಯ.
ಮಾತೃ ಭೂಮಿಗಾಗಿ ಬಲಿದಾನಗೈದ ವೀರರನ್ನು ನಾವು ಸದಾ ನೆನಪಿಸಿಕೊಳ್ಳಬೇಕು. ಅದು ನಮ್ಮ ಕರ್ತವ್ಯವೇ ಆಗಿದೆ. ೨೦೨೧ ರ ನೇತಾಜಿಯವರ ಜನ್ಮ ದಿನಾಚರಣೆಯಿಂದ ಪ್ರತೀವರ್ಷ ಜನವರಿ ೨೩ ರಂದು ‘ಪರಾಕ್ರಮ ದಿನ’ ಎಂದು ಆಚರಿಸಲು ಭಾರತ ಸರಕಾರ ನಿರ್ಧರಿಸಿದೆ.
ಜೈ ಭಾರತ್
- ಗೌರಮ್ಮ ಮಾದಮ್ಮಯ್ಯ, ಬ್ರಾಹ್ಮಣರ ಬೀದಿ, ಮಡಿಕೇರಿ.