ಕುಶಾಲನಗರ, ಜ. ೨೨: ಕುಶಾಲನಗರ ಸಮೀಪದ ಕೊಪ್ಪ ಭಾರತ್ ಮಾತಾ ಪದವಿ ಕಾಲೇಜಿನಲ್ಲಿ ಅಂತರ ಜಿಲ್ಲಾಮಟ್ಟದ ಪಿ.ಯು. ಕಾಲೇಜಿನ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾಟ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಫಾ. ಜೋಸೇಫ್ ವರ್ಗಿಸ್ ಅವರು ಪಂದ್ಯಾಟಕ್ಕೆ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಒಟ್ಟು ೧೫ ತಂಡಗಳು ಪಾಲ್ಗೊಂಡಿದ್ದವು. ವಾಲಿಬಾಲ್ ಪಂದ್ಯಾಟದಲ್ಲಿ ಅರಕಲಗೂಡು ಬಿಜಿಎಸ್ ತಂಡ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ಹುಣಸೂರು ಟಾಲೆಂಟ್ ಪಿ.ಯು. ಕಾಲೇಜು ಮತ್ತು ತೃತೀಯ ಸ್ಥಾನವನ್ನು ಪಾಲಿಬೆಟ್ಟ ಸರ್ಕಾರಿ ಪಿ.ಯು. ಕಾಲೇಜು ಪಡೆದವು. ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಸೆಂಟ್ ಮೇರಿಸ್ ಪ್ರಥಮ, ನೆಲ್ಲಿಹುದಿಕೇರಿ ಸರ್ಕಾರಿ ಪಿ.ಯು. ಕಾಲೇಜು ದ್ವಿತೀಯ ಸ್ಥಾನ ಕಾಲೇಜು ಮತ್ತು ತೃತೀಯ ಸ್ಥಾನವನ್ನು ಪಾಲಿಬೆಟ್ಟ ಸರ್ಕಾರಿ ಪಿ.ಯು. ಕಾಲೇಜು ಪಡೆದವು. ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪ ಸೆಂಟ್ ಮೇರಿಸ್ ಪ್ರಥಮ, ನೆಲ್ಲಿಹುದಿಕೇರಿ ಸರ್ಕಾರಿ ಪಿ.ಯು. ಕಾಲೇಜು ದ್ವಿತೀಯ ಸ್ಥಾನ ಆಡಳಿತಾಧಿಕಾರಿ ಅರುಲ್ ಸೆಲ್ವಿ, ಲೋಕೋಪಯೋಗಿ ಅಧಿಕಾರಿ ಸೈಜನ್ ಕೆ. ಪೀಟರ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರದೀಪ್, ಚಂದನ್ ಮತ್ತಿತರರು ಇದ್ದರು.