ಕುಶಾಲನಗರ, ಜ. ೨೧: ಕುಶಾಲನಗರದ ಸಹರ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಗುಂಡುರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ಐಪಿಎಲ್ ಸೀಸನ್-೨ಕ್ಕೆ ಚಾಲನೆ ನೀಡಲಾಯಿತು.

ಬೊಳ್ಳೂರು ಐಶ್ವರ್ಯ ಪಿಯು ಕಾಲೇಜಿನ ಸ್ಥಾಪಕ ಪುಲಿಯಂಡ ರಾಮ್ ದೇವಯ್ಯ ಚಾಲನೆ ನೀಡಿದರು.

ಕುಶಾಲನಗರ ಪುರಸಭೆ ಅಧ್ಯಕ್ಷ ಬಿ. ಜಯವರ್ಧನ್ ಮೈದಾನ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕುಶಾಲನಗರಕ್ಕೆ ಅತ್ಯಂತ ಅಗತ್ಯವಿದ್ದ ಸುಸಜ್ಜಿತ ಮೈದಾನದ ಕೊರತೆ ನೀಗಿಸುವ ನಿಟ್ಟಿನಲ್ಲಿ ಪುರಸಭೆ ಕಾರ್ಯೋನ್ಮುಖ ವಾಗಿದೆ. ಗುಂಡುರಾವ್ ಬಡಾವಣೆ ಯಲ್ಲಿರುವ ಐಡಿಎಸ್‌ಎಂಟಿಗೆ ಸೇರಿದ ೬ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಮೈದಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಶಾಸಕರ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕುಡಾ ಅಧ್ಯಕ್ಷ ಎಂ.ಎA. ಚರಣ್ ಮಾತನಾಡಿದರು. ಈ ಸಂದರ್ಭ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಎಂ.ಬಿ. ಸುರೇಶ್, ಬಿ.ಎಲ್. ಜಗದೀಶ್, ಲೋಕೋಪಯೋಗಿ ಇಲಾಖೆ ಅಭಿಯಂತರ ಸೈಜನ್ ಪೀಟರ್, ಕ್ಲಬ್ ಅಧ್ಯಕ್ಷ ಎಚ್.ಕೆ. ಸುಮೇರ್, ಕಾರ್ಯದರ್ಶಿ ಚಂದು ಸೇರಿದಂತೆ ಕ್ಲಬ್ ಪದಾಧಿಕಾರಿಗಳು ಇದ್ದರು.

ಪತ್ರಕರ್ತರು, ಜನಪ್ರತಿನಿಧಿಗಳು, ಆಯೋಜಕರು ಹಾಗೂ ೧೦ ತಂಡಗಳ ನಾಯಕರÀ ನಡುವೆ ಸೌಹಾರ್ದ ಪಂದ್ಯ ನಡೆಯಿತು. ೧೦ ತಂಡಗಳ ನಾಯಕರ ಟೀಂ ಓನರ್ಸ್ ತಂಡ ಪ್ರಥಮ, ಪತ್ರಕರ್ತರ ತಂಡ ದ್ವಿತೀಯ ಸ್ಥಾನಗಳಿಸಿತು.