ಮಡಿಕೇರಿ, ಜ. ೨೧: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಮೈಸೂರು ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕರ ಸಂಘಟನೆ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ೨೦೨೨-೨೩ನೇ ಸಾಲಿನ ‘ಶಿಕ್ಷಣ ಸೇವಾ ರತ್ನ ಪ್ರಶಸ್ತಿ’ಗೆ ಜಿಲ್ಲೆಯ ಸಿಆರ್ಪಿಗಳು ಆಯ್ಕೆಯಾಗಿದ್ದಾರೆ.
ಪೊನ್ನಂಪೇಟೆ ಮತ್ತು ಟಿ. ಶೆಟ್ಟಿಗೇರಿ ಕ್ಲಸ್ಟರ್ಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ತಿರುನೆಲ್ಲಿಮಡ ಜೀವನ್, ವೀರಾಜಪೇಟೆ ಮತ್ತು ಕೊಳತ್ತೋಡು ಕ್ಲಸ್ಟರ್ಗಳಲ್ಲಿ ಸೇವೆ ಸಲ್ಲಿಸಿರುವ ವಿ.ಟಿ. ವೆಂಕಟೇಶ್., ನಂಜರಾಯಪಟ್ಟಣ ಕ್ಲಸ್ಟರ್ನಲ್ಲಿ ಸೇವೆ ಸಲ್ಲಿಸಿದ ಬಿ.ಎನ್. ಸತ್ಯನಾರಾಯಣ, ಮಡಿಕೇರಿ ತಾಲೂಕು ಪೆರಾಜೆ ಕ್ಲಸ್ಟರ್ ಸಿಆರ್ಪಿ ರೇಖಾ ಯು.ಎಸ್., ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಕ್ಲಸ್ಟರ್ ಸಿಆರ್ಪಿ ಸುರೇಶ್ ಎಸ್.ಎಂ. ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಫೆ. ೫ ರಂದು ಬೆಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಶಿಕ್ಷಕ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.