ಕೂಡಿಗೆ, ಜ. ೨೧: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆರಂಭಗೊAಡಿವೆ. ಹೆಗ್ಗಡಹಳ್ಳಿ, ಮಾದಲಾಪುರ, ಹುದುಗೂರು ಕೂಡಿಗೆ ಸೇರಿದಂತೆ ವಿವಿಧ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳು, ಉಪರಸ್ತೆಗಳ ಕಾಮಗಾರಿ, ಕಾಂಕ್ರೀಟ್ ಚರಂಡಿಗಳ ನಿರ್ಮಾಣ ನಡೆಯುತ್ತಿವೆ. ಶಾಸಕರ ಸೂಚನೆಯಂತೆ ಆಯಾ ವಾರ್ಡ್ಗಳ ಸದಸ್ಯರು ಕಾಮಗಾರಿಯು ನಡೆಯುವ ಸಂದರ್ಭ ಹಾಜರಿದ್ದು ಗುಣಮಟ್ಟದ ಕಾಮಗಾರಿಯನ್ನು ಮಾಡಿಸುತ್ತಿದ್ದಾರೆ.