ಮಡಿಕೇರಿ, ಜ. ೨೦: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ ೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ೩ನೇ ದಿನದ ಮೊದಲ ಪಂದ್ಯದಲ್ಲಿ ಸ್ಪೋರ್ಟ್ಸ್ ವರ್ಲ್ಡ್ ಟಿ ೧೦ ತಂಡ ಜಯ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಶ್ರೀ ಕೋಟೆ ಮಹಾಗಣಪತಿ ತಂಡ ೧೦ ಓವರ್‌ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ೭೨ ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸ್ಪೋರ್ಟ್ಸ್ ವರ್ಲ್ಡ್ ತಂಡ ೯.೩ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿತು.

೨ನೇ ಪಂದ್ಯದಲ್ಲಿ ಕಿಂಬರ್ಲಿ ಟಿ ೧೦ ತಂಡ ೧೦ ಓವರ್‌ಗಳಲ್ಲಿ ೩ ವಿಕೆಟ್‌ಗಳ ನಷ್ಟಕ್ಕೆ ೮೦ ರನ್‌ಗಳನ್ನು ಸಾಧಿಸಿತು. ಧಾರ್ಮಿಕ್ ಟಿ ೧೦ ತಂಡವು ೯.೨ ಓವರ್‌ಗಳಲ್ಲಿ ೬ ವಿಕೆಟ್‌ಗಳ ನಷ್ಟಕ್ಕೆ ಗುರಿ ಸಾಧಿಸಿ ಜಯ ಗಳಿಸಿತು.

೩ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸ್ಪೋರ್ಟ್ಸ್ ವರ್ಲ್ಡ್ ಟಿ ೧೦ ತಂಡವು ೧೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೭ ರನ್‌ಗಳನ್ನು ಗಳಿಸಿತು. ಮ್ಯಾಕ್ಸ್ವೆಲ್ ಟಿ ೧೦ ತಂಡವು ೮.೫ ಓವರ್‌ಗಳಲ್ಲಿ ೨ ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ಸಾಧಿಸಲು ಸಫಲವಾಯಿತು .