ಗೋಣಿಕೊಪ್ಪ ವರದಿ, ಜ. ೨೦: ಬೈತೂರು ಹಬ್ಬ ಹಿನ್ನೆಲೆ, ಪೆರುಂಬಾಡಿಯಿAದ ಮಾಕುಟ್ಟದವರೆಗೆ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಹೆಚ್ಚು ಭಕ್ತರು ತೆರಳುವ ಕಾರಣ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ.

ಬೈತೂರು ಹಬ್ಬ ತಕ್ಕ ಪುಗ್ಗೇರ ಪಿ. ಪೊನ್ನಪ್ಪ ಈ ಬಗ್ಗೆ ಪ್ರತಿಕ್ರಿಯಿಸಿದ್ದು. ಶಾಸಕ ಕೆ.ಜಿ. ಬೋಪಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ವಾರ್ಷಿಕ ಉತ್ಸವಕ್ಕೆ ಹೆಚ್ಚು ಭಕ್ತರಿಗೆ ಈ ರಸ್ತೆ ಪ್ರಯೋಜನವಾಗಲಿದೆ ಎಂದು ಮನವಿ ಮಾಡಿಕೊಳ್ಳಲಾಗಿತ್ತು. ಸ್ಪಂದಿಸಿದ ಶಾಸಕರು ರಸ್ತೆ ದುರಸ್ತಿಗೆ ಕ್ರಮವಹಿಸಿದ್ದಾರೆ ಎಂದರು.