ಮಡಿಕೇರಿ, ಜ.೨೦ : ವೀರಾಜಪೇಟೆ ತಾಲೂಕಿನ ವಿ.ಬಾಡಗದ ಹೈ ಫ್ಲರ‍್ಸ್ ತಂಡದ ವತಿಯಿಂದ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸಲಾಗಿದ್ದು, ಫೆ.೨೨ರಿಂದ ೨೬ರವರೆಗೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಹೈ ಫ್ಲರ‍್ಸ್ ಕ್ರೀಡಾ ಸಮಿತಿ ಕಾರ್ಯದರ್ಶಿ ಮಚ್ಚಾರಂಡ ಪ್ರವೀಣ್ ತಿಮ್ಮಯ್ಯ, ಪಂದ್ಯಾವಳಿಯು ವಿ.ಬಾಡಗ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾವಳಿಯು ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ, ಹಾತೂರು, ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಬೇರಳಿನಾಡು, ಕುತ್ತುನಾಡು ಹಾಗೂ ಬೊಟ್ಟಿಯತ್ ನಾಡು ವ್ಯಾಪ್ತಿಯಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಪಾಲ್ಗೊಳ್ಳಲಿರುವ ತಂಡಗಳಲ್ಲಿ ನಾಲ್ಕು ಮಂದಿ ಕೊಡವ ಅತಿಥಿ ಆಟಗಾರರಿಗೆ ಅವಕಾಶವಿದೆ. ಜಿಲ್ಲೆಯ ಯಾವದೇ ಕೊಡವ ಕುಟುಂಬದ ಆಟಗಾರರನ್ನು ಅತಿಥಿ ಆಟಗಾರರಾಗಿ ಆಡಿಸಬಹುದಾಗಿದೆ ಎಂದು ತಿಳಿಸಿದರು.

ಹಾಕಿ ಪಂದ್ಯಾವಳಿಯು ಹಾಕಿ ಕೂರ್ಗ್ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿದ್ದು, ಹಾಕಿ ಕರ್ನಾಟಕದ ನಿಯಮಾವಳಿಗೆ ಬದ್ಧವಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಹಾಕಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ವಿಜೇತ ತಂಡಗಳಿಗೆ ನಗದು ಹಾಗೂ ಆಕರ್ಷಕ ಪಾರಿತೋಷಕ ನೀಡಲಾಗುವದು. ಅಂದಾಜು ೨೫ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು,

(ಮೊದಲ ಪುಟದಿಂದ) ನಾಕೌಟ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಭಾಗವಹಿಸಲು ಇಚ್ಛಿಸುವ ತಂಡಗಳು ಫೆ.೧೦ರ ಒಳಗಾಗಿ ೯೪೮೧೮೮೩೭೩೮, ೭೦೨೨೩೫೬೪೫೬ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಮ್ಮಯ್ಯ ತಿಳಿಸಿದರು.

ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ, ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ, ಪದಾಧಿಕಾರಿಗಳಾದ ಕಂಜಿತAಡ ಪೂವಣ್ಣ, ಕೋಲತಂಡ ಸುಬ್ರಮಣಿ, ತೀತಿಮಾಡ ಬೋಪಣ್ಣ ಇದ್ದರು.