ನಮ್ಮ ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಹೆಸರು ಅವರ ವ್ಯಕ್ತಿತ್ವ ಕಣ್ಮುಂದೆ ನಿಲ್ಲುವುದು. ಅವರು ಹೋರಾಟ ದಲ್ಲಿ ಅಸಂಖ್ಯಾತ ಜನರಿಗೆ ಸ್ಪೂರ್ತಿಯಾಗಿ ದ್ದರು. ಅವರಲ್ಲಿ ದೇಶಪ್ರೇಮ ಅಗಾಧ ವಾಗಿತ್ತು. ಅವರು ದೇಶಕ್ಕಾಗಿ ತಮ್ಮ ತನು-ಮನವನ್ನು ಮುಡಿಪಾಗಿಟ್ಟು ಯಾವುದೇ ಬಲಿದಾನಕ್ಕೂ ತಯಾರಿದ್ದರು. ನೇತಾಜಿ, ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿ ಮುಂದೆ ಅಜಾದ್ ಹಿಂದ್ ಫೌಚಿನ ಮೂಲಕ ಭಾರತದ ಸ್ವಾತಂತ್ರö್ಯಕ್ಕಾಗಿ ಹೋರಾಡಿದರು. ಬ್ರಿಟನ್ನಿನಲ್ಲಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದರೂ ಅದನ್ನು ತಿರಸ್ಕರಿಸಿ ಬ್ರಿಟೀಷರ ವಿರುದ್ಧ ಭಾರತಕ್ಕೆ ಬಂದು ಹೋರಾಟದಲ್ಲಿ ತೊಡಗಿದರು. ನೀವು ನನಗೆ ರಕ್ತದಾನ ಮಾಡಿ, ನಾನು ನಿಮಗೆ ಸ್ವಾತಂತ್ರö್ಯ ಕೊಡುವೆನೆಂದು ಚಳುವಳಿಯ ಸಂದರ್ಭದಲ್ಲಿ ಕರೆ ನೀಡಿ ಅದೆಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿ ಪ್ರತಿಯೊಬ್ಬ ನಾಗರಿಕನಲ್ಲೂ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿ ಕೆಚ್ಚೆದೆಯ ದೇಶಪ್ರೇಮಿ ಎನಿಸಿದರು ಸುಭಾಷರು.
ಇಂತಹ ಶ್ರೇಷ್ಠ ಹೋರಾಟಗಾರ ನಮ್ಮ ದೇಶವನ್ನು ಬ್ರಿಟಿಷರಿಂದ ಮುಕ್ತ ಗೊಳಿಸಲು ಬಹುವಾಗಿ ಶ್ರಮಿಸಿದರು. ಬಂಗಾಳಿ ಕುಟುಂಬದವರಾದ ನೇತಾಜಿಯವರು ಶ್ರೀಮಂತ ಕುಟುಂಬದವರು ತಮ್ಮ ಜೀವನವನ್ನು ಅವರು ದೇಶಕ್ಕಾಗಿ ಮುಡಿಪಾಗಿಟ್ಟರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹನ್ನೊಂದು ಬಾರಿ ಅವರು ಸೆರೆಮನೆ ವಾಸ ಅನುಭವಿಸಿದರು. ಆದರೂ ದೇಶದ ಅಭಿಮಾನ ಕಿಂಚಿತ್ತೂ ಕಡಿಮೆ ಆಗಲಿಲ್ಲ. ಅದರಿಂದ ಉಗ್ರಗೊಂಡ ಅವರು ಇನ್ನು ಹೆಚ್ಚು ಹೋರಾಡುವಂತೆ ಮನಸ್ಸು ಪ್ರೇರೇಪಿಸಿತು.
ಅವರಲ್ಲಿ ನೀತಿ, ನಿಪುಣತೆ, ಚಾಣಕ್ಯತನ ಸಂಘಟನಾ ಸಾಮರ್ಥ್ಯವಿತ್ತು. ಉತ್ತರ ಬಂಗಾಳದಲ್ಲಿ ಪ್ರವಾಹ ಪೀಡಿತರಿಗಾಗಿ ಸ್ವಯಂ ಸೇವಕ ದಳ ಕಟ್ಟಿ ಅವಿರತವಾಗಿ ದುಡಿದರು. ಇವರ ಸೇವೆಯನ್ನು ಪರಿಗಣಿಸಿ ಕೊಲ್ಕತ್ತದ ಕಾರ್ಪೋರೇಷನ್‌ನಲ್ಲಿ ಅಧಿಕಾರ ನೀಡಿದಾಗ ಅವರು ಅದನ್ನು ಸ್ವೀಕರಿಸದೆ ತಮ್ಮನ್ನು ಜನಸೇವೆಯಲ್ಲಿ ತೊಡಗಿಸಿ ಕೊಂಡರು. ಅವರ ಜೀವನವಿಡೀ ಜೈಲುವಾಸವೇ ಆಯಿತು, ಅಲ್ಲಿ ಅವರ ಆರೋಗ್ಯ ಹದಗೆಟ್ಟಾಗ ಯುರೋಪ್‌ಗೆ ಹೋಗಿ ಅಲ್ಲಿ ಹಿಟ್ಲರ್‌ನ ಭೇಟಿಯಾಗಿ ಮುಂದಿನ ಕಾರ್ಯವೈಖರಿಯ ಬಗ್ಗೆ ಅವರೊಡನೆ ಚರ್ಚಿಸಿ ೧೯೩೮ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಜನತೆ ನೇತಾಜಿಯವರನ್ನು ಚುನಾಯಿಸಿ ದರು. ಸುಭಾಷ್‌ರ ಕ್ರಾಂತಿಕಾರಿ ಭಾವ ಗಾಂಧೀಜಿಗೆ ಸರಿ ಎನಿಸಲಿಲ್ಲ. ಅದರಿಂದ ಸುಭಾಷ್‌ರು ಅಧ್ಯಕ್ಷರಾಗು ವುದನ್ನು ಗಾಂಧೀಜಿ ಒಪ್ಪಲಿಲ್ಲ. ಜನರು ಸುಭಾಷರನ್ನು ಚುನಾಯಿಸಿದರು. ಅವರು ಭಾರತೀಯ ರಾಷ್ಟಿçÃಯ ಸೇನೆಯನ್ನು ಸ್ಥಾಪಿಸಿ ಅವಿಭಾಜ್ಯ ಭಾರತದ ಪ್ರಥಮ ಪ್ರಧಾನಿಯಾದರು.
ಸುಭಾಷರು ಒಳ್ಳೆಯ ಕವಿ ಭಾಷಣಕಾರರೂ ಆಗಿದ್ದರು. ಆಜಾದ್ ಹಿಂದ್ ಸೈನ್ಯದ ಸೈನಿಕರು ಸುಭಾಷ್ ಚಂದ್ರ ಬೋಸ್‌ರನ್ನು ನೇತಾಜಿ ಎಂದು ಗೌರವದಿಂದ ಕರೆದರು. ಹಿಂದೂ ಮುಸ್ಲಿಮರ ಐಕ್ಯತೆಗಾಗಿ ಅವರು ಶ್ರಮಿಸಿದರು. ಸುಭಾಷರು ಒಡಿಶಾದ ಕಟಕ್‌ನಲ್ಲಿ ಜಾನಕಿನಾಥ್ ಮತ್ತು ಪ್ರಭಾವತಿ ದೇವಿಯ ಪುತ್ರನಾಗಿ ೧೮೯೭ ಜನವರಿ ೨೩ ರಂದು ಜನಿಸಿದರು. ಸ್ವಾತಂತ್ರö್ಯ ಸಂಗ್ರಾಮ ಹೋರಾಟದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿ ಕೊಂಡ ಅಪ್ರತಿಮ ಸ್ವಾತಂತ್ರö್ಯ ಹೋರಾಟಗಾರ ನೇತಾಜಿ. ೧೯೪೭ರಲ್ಲಿ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು.
ಮಾತೃ ಭೂಮಿಗಾಗಿ ಹೋರಾಡಿದ ವೀರರನ್ನು ದೇಶ ಸದಾ ಜ್ಞಾಪಿಸಿಕೊಳ್ಳುವುದು ಕರ್ತವ್ಯವಾಗಿದೆ. ಇವರು ಯುವಕರಿಗೆ ಆದರ್ಶ ಪ್ರೇರಕ ಶಕ್ತಿಯಾಗಿರು ವರು. ಬ್ರಿಟಿಷರನ್ನು ಅಟ್ಟಹಾಸಗೈದ ವೀರ ಪರಾಕ್ರಮಿ ನೇತಾಜಿಯವರು. ಅವರು ಸೃಷ್ಟಿಸಿದ ಹೋರಾಟದ ಜಗತ್ತು ಭಾರತೀಯರಿಗೆ ಸ್ಫೂರ್ತಿದಾಯಕ, ಭಾರತ ಮಾತೆಯ ವೀರಪುತ್ರನ ಜನುಮ ದಿನದ ಶುಭಾಶಯ ಬಯಸೋಣ. ಅವರ ಜನ್ಮದಿನವನ್ನು ಎಲ್ಲರೂ ಆಚರಿಸುವಂತಾಗಲಿ.
-ಚೊಟ್ಟೆಯAಡಮಾಡ ಲಲಿತ ಕಾರ್ಯಪ್ಪ
ಟಿ. ಶೆಟ್ಟಿಗೇರಿ.