ವೀರಾಜಪೇಟೆ, ಜ. ೨೧: ಜೀವನ ನಿರ್ವಹಣೆಗಾಗಿ ಇಂಗ್ಲಿಷ್ ಕಲಿಯುವದರೊಂದಿಗೆ ಬದುಕಿನ ಸಾಂಸ್ಕöÈತಿಕ ಸಮೃದ್ಧತೆಗಾಗಿ ಕನ್ನಡ ಕಲಿಯುವ ಮೂಲಕ ನಮ್ಮ ಸಾಂಸ್ಕöÈತಿಕ ಅಸ್ಮಿತೆ ಉಳಿಸಿಕೊಳ್ಳ ಬೇಕಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಅಭಿಪ್ರಾಯಪಟ್ಟರು.ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ೯ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಜಿ. ಬೋಪಯ್ಯ,(ಮೊದಲ ಪುಟದಿಂದ) ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷ ಗಳಿಂದ ಜೀವಂತಿಕೆ ಕಾಪಾಡಿಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಒಂದು ಸಂಸ್ಕöÈತಿಯಾಗಿದೆ. ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದ್ದು. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಕೀರ್ತಿಗೆ ಕನ್ನಡ ಭಾಷೆ ಪಾತ್ರವಾಗಿದೆ. ಎಲ್ಲಾ ಜ್ಞಾನ ಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಯ ಕಲೆ, ಸಂಸ್ಕöÈತಿ, ಆಚಾರ ವಿಚಾರಗಳಿಗೆ ದೊರೆತ ಗೌರವ ಎಂಬುದು ಮುಖ್ಯ ಅಂಶ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ಮಂಡಿಸುವಾಗ ಇಲ್ಲಿನ ಪ್ರಾದೇಶಿಕ ಸಮಸ್ಯೆಗಳಿಗೆ ಒತ್ತು ಕೊಡಬೇಕು. ಜನಪ್ರತಿನಿಧಿಯಾಗಿ ನಾಡುನುಡಿಗೆ ಸಂಬAಧಪಟ್ಟAತೆ ಯಾವುದೇ ಸಮಸ್ಯೆಗಳಿದ್ದರೂ ಪೂರಕ ಸ್ಪಂದನ ನೀಡುವ ಭರವಸೆಯಿತ್ತÀರು.
ಮೈಸೂರಿನ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಎಂ.ಪಿ. ರೇಖಾ ವಸಂತ್ ಮಾತನಾಡಿ ಕೊಡಗಿನ ಶ್ರೇಷ್ಠತೆಯ ಬಗ್ಗೆ ಬಹಳಷ್ಟು ಕವಿಗಳು ಈಗಾಗಲೇ ಬರೆದಿದ್ದಾರೆ. ಕೊಡಗಿನಲ್ಲಿ ಬಂದೂಕನ್ನು ಹಿಡಿಯುವ ಕೈ ಲೇಖನಿಯನ್ನು ಹಿಡಿದಿವೆ. ಮನುಷ್ಯ ಹೆಚ್ಚು ಸಾಕ್ಷರರಾಗುತ್ತಾ ಹೋದ ಹಾಗೆ ಅವರಲ್ಲಿರುವ ರಾಕ್ಷಸಿತನಗಳು ಹೊರಬರುತ್ತವೆ, ನಾಡು ನುಡಿಗಾಗಿ ನಡೆಯುವ ನುಡಿ ಹಬ್ಬಗಳಲ್ಲಿ ಜಾತಿ, ಮತ ಧರ್ಮಗಳು ಒಳನುಸುಳುತ್ತಿವೆ. ಇದು ಹೆಚ್ಚು ಆಘಾತಕಾರಿ ವಿಚಾರ. (ಮೊದಲ ಪುಟದಿಂದ) ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷ ಗಳಿಂದ ಜೀವಂತಿಕೆ ಕಾಪಾಡಿಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಒಂದು ಸಂಸ್ಕöÈತಿಯಾಗಿದೆ. ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದ್ದು. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಕೀರ್ತಿಗೆ ಕನ್ನಡ ಭಾಷೆ ಪಾತ್ರವಾಗಿದೆ. ಎಲ್ಲಾ ಜ್ಞಾನ ಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಯ ಕಲೆ, ಸಂಸ್ಕöÈತಿ, ಆಚಾರ ವಿಚಾರಗಳಿಗೆ ದೊರೆತ ಗೌರವ ಎಂಬುದು ಮುಖ್ಯ ಅಂಶ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಗಳನ್ನು ಮಂಡಿಸುವಾಗ ಇಲ್ಲಿನ ಪ್ರಾದೇಶಿಕ ಸಮಸ್ಯೆಗಳಿಗೆ ಒತ್ತು ಕೊಡಬೇಕು. ಜನಪ್ರತಿನಿಧಿಯಾಗಿ ನಾಡುನುಡಿಗೆ ಸಂಬAಧಪಟ್ಟAತೆ ಯಾವುದೇ ಸಮಸ್ಯೆಗಳಿದ್ದರೂ ಪೂರಕ ಸ್ಪಂದನ ನೀಡುವ ಭರವಸೆಯಿತ್ತÀರು.
ಮೈಸೂರಿನ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಎಂ.ಪಿ. ರೇಖಾ ವಸಂತ್ ಮಾತನಾಡಿ ಕೊಡಗಿನ ಶ್ರೇಷ್ಠತೆಯ ಬಗ್ಗೆ ಬಹಳಷ್ಟು ಕವಿಗಳು ಈಗಾಗಲೇ ಬರೆದಿದ್ದಾರೆ. ಕೊಡಗಿನಲ್ಲಿ ಬಂದೂಕನ್ನು ಹಿಡಿಯುವ ಕೈ ಲೇಖನಿಯನ್ನು ಹಿಡಿದಿವೆ. ಮನುಷ್ಯ ಹೆಚ್ಚು ಸಾಕ್ಷರರಾಗುತ್ತಾ ಹೋದ ಹಾಗೆ ಅವರಲ್ಲಿರುವ ರಾಕ್ಷಸಿತನಗಳು ಹೊರಬರುತ್ತವೆ, ನಾಡು ನುಡಿಗಾಗಿ ನಡೆಯುವ ನುಡಿ ಹಬ್ಬಗಳಲ್ಲಿ ಜಾತಿ, ಮತ ಧರ್ಮಗಳು ಒಳನುಸುಳುತ್ತಿವೆ. ಇದು ಹೆಚ್ಚು ಆಘಾತಕಾರಿ ವಿಚಾರ. ನಾವು ಇನ್ನೊಂದು ಧರ್ಮವನ್ನು ಗೌರವಿಸಿದಾಗ ಇನ್ನೊಂದು ಭಾಷೆಯನ್ನು ಪ್ರೀತಿಸಿದಾಗ ಆ ಧರ್ಮದ, ಆ ಭಾಷೆಯ ಶ್ರೀಮಂತಿಕೆ ಹೆಚ್ಚಾಗುತ್ತದೆ. ಹೀಗೆ ಹಲವಾರು ವಿಚಾರಗಳ ಬಗ್ಗೆ ಪ್ರಸ್ತುತಪಡಿಸಿ, ನಮ್ಮ ನಾಡಿನ ಕವಿವರ್ಯರ ಬರವಣಿಗೆ, ಸಾಹಿತ್ಯದ ಗಟ್ಟಿತನ, ಅವರ ಅಗಾಧ ಜ್ಞಾನ, ವಿಚಾರವಂತಿಕೆ ಬಗ್ಗೆ, ಭಾಷೆಗೆ ಇರಬೇಕಾದ ಗಟ್ಟಿತನದ ಬಗ್ಗೆ, ಕನ್ನಡಿಗರಿಗಿರಬೇಕಾದ ಬದ್ಧತೆಯ ಬಗ್ಗೆ ಮಾತನಾಡಿದರು.
ಆರ್ಜಿ ಗ್ರಾಮದ ಸಂತ ಅಂತೋಣಿ ದೇವಾಲಯದ ರೋನಿ ರವಿಕುಮಾರ್, ಗುಂಡಿಗೆರೆಯ ಮೌಲಾನ ಸಿ.ಪಿ. ಅಹಮದ್ ಮದನಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೇಶವ್ ಕಾಮತ್ ಸಾಹಿತ್ಯ ಪರಿಷತ್ತಿನ ಧÀ್ವಜವನ್ನು ಸಮ್ಮೇಳನಾದ್ಯಕ್ಷರಿಗೆ ಹಸ್ತಾಂತರಿಸಿದ ಬಳಿಕ ಸಮ್ಮೇಳನದ ಕುರಿತು ಆಶಯ ನುಡಿಗಳನ್ನಾಡಿದರು.
ಇದೇ ಸಂದರ್ಭ ವೇದಿಕೆಯಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಟಿ.ಪಿ ರಮೇಶ್, ಸಾಹಿತ್ಯ ಪರಿಷತ್ತಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಶಾಸಕ ಕೆ.ಜಿ. ಬೋಪಯ್ಯ, ಸಾಹಿತಿ ವತ್ಸಲ ಶ್ರೀಶಾ ಅವರ ತಪಸ್ಯಾ ಗಜಲ್ಗಳನ್ನು ಕೃತಿ ಬಿಡುಗಡೆಗೊಳಿಸಿದರು.
ಸಂತ ಅನ್ನಮ್ಮ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಜಯಪ್ರಕಾಶ್ ನಾರಾಯಣ ಸ್ಮಾರಕ ಶಾಲೆ ಮುಖ್ಯ ಶಿಕ್ಷಕ ಲಾಲ್ ಕುಮಾರ್ ಮತ್ತು ವಿದ್ಯಾರ್ಥಿಗಳ ತಂಡ ರೈತಗೀತೆ ಪ್ರಸ್ತುತಪಡಿಸಿದರೆ, ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಗೀತಗಾಯನ ನಡೆಸಿಕೊಟ್ಟರು.
ಪರಿಷತ್ತಿನ ಗೌರವ ಕಾರ್ಯದರ್ಶಿ ಟೋಮಿ ಥೋಮಸ್ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ಆನ್ಜೋವಿಟಾ ವತ್ಸಲಾ ಶ್ರೀಶಾ ಅವರ ಪರಿಚಯ ಮಾಡಿದರೆ, ಅಶ್ವಿನಿ ರೇಖಾ ವಸಂತ್ ಅವರ ಪರಿಚಯ ಮಾಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ಮಮತಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಎಸ್ ಪೂವಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಜಿ.ಪಂ.ಮಾಜಿ ಸದಸ್ಯ ಶಶಿ ಸುಬ್ರಮಣಿ, ಮಡಿಕೇರಿ ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್, ಕುಶಾಲನಗರ ಕಸಾಪ ಅಧ್ಯಕ್ಷ ಕೆ.ಎಸ್ ಮೂರ್ತಿ, ಪೊನ್ನಂಪೇಟೆ ಕಸಾಪ ಅಧ್ಯಕ್ಷ ದಯಾ ಚಂಗಪ್ಪ, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಜಿ ಪಾರ್ವತಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದÀ, ಆರ್ಜಿ ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ. ಮಣಿ, ಪಂಚಾಯಿತಿ ಕಾರ್ಯದರ್ಶಿ ರಾಜನ್, ಆರ್ಜಿ ಮತ್ತು ಬೇಟೋಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಸ್ವಾಗತಿಸಿದರೆ, ಪತ್ರಕರ್ತೆ ಉಷಾ ಪ್ರೀತಮ್ ನಿರೂಪಿಸಿ, ಟಿ.ಎಚ್. ಮಂಜುನಾಥ್ ವಂದಿಸಿದರು.