ಸುAಟಿಕೊಪ್ಪ, ಜ. ೨೦: ಆಕ್ರಮವಾಗಿ ಕಾರಿನಲ್ಲಿ ಗೋಮಾಂಸವನ್ನು ತಂದು ಸುಂಟಿಕೊಪ್ಪ ಪಟ್ಟಣದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಡಿಕೇರಿ ಆಜಾದ್ ನಗರದ ಜಮೀರ್ ಎಂಬಾತ ಸ್ವಿಫ್ಟ್ ಕಾರಿನಲ್ಲಿ ೮೦ ಕೆ.ಜಿ. ಗೋಮಾಂಸವನ್ನು ತಂದು ಸುಂಟಿಕೊಪ್ಪ ಪಟ್ಟಣದ ವಿವಿಧ ಕಡೆ ಮಾರಾಟ ಮಾಡುತ್ತಿದ್ದ

ಗೋಮಾಂಸ ಮಾರಾಟ - ಆರೋಪಿ ಬಂಧನ

(ಮೊದಲ ಪುಟದಿಂದ) ಬಗ್ಗೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಅನ್ವಯ ಸುಂಟಿಕೊಪ್ಪ ಪೊಲೀಸರು ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಅವರ ಮಾರ್ಗದರ್ಶನದಲ್ಲಿ ಸುಂಟಿಕೊಪ್ಪದಲ್ಲಿ ದಾಳಿ ನಡೆಸಿ ಆರೋಪಿಯನ್ನು ಮಾಲುಸಮೇತ ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ಮಾರಾಟ ಮಾಡಲು ಇಟ್ಟಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಸ್ವಾಮಿ, ಎಎಸ್‌ಐ ಶಿವಪ್ಪ, ಮುಖ್ಯಪೇದೆ ಸತೀಶ, ಪೇದೆಗಳಾದ ಜಗದೀಶ್, ಶ್ರೀಕಾಂತ್, ಬಿರದಾರ ಹಾಗೂ ಜೈಶಂಕರ್ ಪಾಲ್ಗೊಂಡಿದ್ದರು.