ಮಡಿಕೇರಿ, ಜ. ೨೦: ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಟ್ಯಾಂಕ್‌ಗೆ ಬಿದ್ದು ವಾಟರ್‌ಮೆನ್ ಸಾವನ್ನಪ್ಪಿರುವ ಘಟನೆ ಚೆಂಬು ಗ್ರಾಮದ ಊರುಬೈಲು ಬೊಳುಗಲ್ಲುವಿನಲ್ಲಿ ನಡೆದಿದೆ. ಚೆಂಬು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ (ವಾಟರ್‌ಮೆನ್) ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ಮಾರ್ಪಡ್ಕ (೨೬) ಮೃತ ದುರ್ಧೈವಿ.
(ಮೊದಲ ಪುಟದಿಂದ) ಮಧ್ಯಾಹ್ನ ವೇಳೆಯಲ್ಲಿ ಟ್ಯಾಂಕ್‌ನಲ್ಲಿ ನೀರು ತುಂಬಿದೆಯೇ ಎಂದು ಪರಿಶೀಲಿಸಲು ಟ್ಯಾಂಕ್ ಮೇಲೆ ಏರಿದ ನಿತಿನ್, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ ಎನ್ನಲಾಗಿದೆ. ಮಗ ಮನೆಗೆ ಬಾರದ ಹಿನ್ನೆಲೆ ತಾಯಿ ಸಂಜೆ ವೇಳೆಯಲ್ಲಿ ಹುಡುಕಾಟ ನಡೆಸಿದಾಗ ನಿತಿನ್‌ನ ಮೊಬೈಲ್ ಹಾಗೂ ಚಪ್ಪಲಿ ಟ್ಯಾಂಕ್ ಬಳಿ ಪತ್ತೆಯಾಗಿದೆ.
ಸ್ಥಳೀಯರು ಟ್ಯಾಂಕ್ ಮೇಲೇರಿ ಪರಿಶೀಲಿಸಿದಾಗ ಮೃತದೇಹ ಗೋಚರಿಸಿಲ್ಲ. ಬಳಿಕ ನೀರನ್ನು ಖಾಲಿ ಮಾಡಿದ ಸಂದರ್ಭ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೇಲೆತ್ತಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸ ಲಾಯಿತು. ಸಂಪಾಜೆ ಉಪಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.