ವೀರಾಜಪೇಟೆ, ಜ. ೨೧: ಗಡಿನಾಡು ಎಂದು ಖ್ಯಾತಿಗಳಿಸಿರುವ ವೀರಾಜಪೇಟೆ ತಾಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮಗಳ ಸಂಗಮದಲ್ಲಿ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ವಿವಿಧ ಜಾನಪದ ಕಲಾತಂಡಗಳ ಮೆರುಗಿನೊಂದಿಗೆ ಕನ್ನಡ ನುಡಿಹಬ್ಬ ಸಡಗರದಿಂದ ನಡೆಯಿತು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೯ನೇ ಅಧ್ಯಕ್ಷರಾದ ಪಕ್ಷಿತಜ್ಷ, ವೈದ್ಯರೂ ಆದ ಡಾ. ನರಸಿಂಹನ್ ಅವರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಕಲಾತಂಡಗಳ ಮೆರವಣಿಗೆಗೆ ಆರ್ಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಪೇಂದ್ರ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಬೇಟೋಳಿ ಪಂಚಾಯಿತಿ ಕಚೇರಿ ಮುಂಭಾಗದಿAದ ಮೆರವಣಿಗೆ ಹೊರಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದವರೆಗೆ ಸಾಗಿ ಬಂತು. ಸಮ್ಮೇಳನಾಧ್ಯಕ್ಷರಿಗೆ ಮೆರವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ ಸಾಥ್ ಕೊಟ್ಟರು .
ವಿವಿಧ ಮಂಗಳವಾದ್ಯಗಳ ಮೂಲಕ ಪ್ರಾರಂಭಗೊAಡ ಮೆರವಣಿಗೆಯಲ್ಲಿ ಬದ್ರಿಯಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಾಗೂ ಶಂಸುಲ್ ಉಲಮಾ ಶಾಲೆಯ ಸ್ತಬ್ದಚಿತ್ರ ಜನಮನ ಸೆಳೆಯಿತು. ಆರ್ಜಿ ಮತ್ತು ಬೇಟೋಳಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಸ್ವಸಹಾಯ ಸಂಘದ ಸದಸ್ಯರು. ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.
ಜನಮನ ಸೆಳೆದ ಮೆರವಣಿಗೆ
ಆರ್ಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣ ಹಾಗೂ ಗ್ರಾಮದ ಮುಖ್ಯರಸ್ತೆಗಳು ನವ ವಧುವಿನಂತೆ ಸಿಂಗಾರ ಗೊಂಡಿತ್ತು. ಅದ್ಧೂರಿ ಮೆರವಣಿಗೆಗೆ ಕಲಾತಂಡಗಳು ಸಾಥ್ ನೀಡಿದವು. ವರ್ಣರಂಜಿತ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ,
(ಮೊದಲ ಪುಟದಿಂದ) ಮಂಗಳವಾದ್ಯ, ಚಂಡೆ, ಕಳಸಗಳು, ಕಂಸಾಳೆ, ಪೂಜಾ ಕುಣಿತ, ನಂದಿ ಧ್ವಜ, ದಫ್, ಕೊಡಗಿನ ವಾ¯ಗ, ಬ್ಯಾಂಡ್ ಸೆಟ್, ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಗ್ರಾಮದಲ್ಲಿ ಹಬ್ಬದ ವಾತಾವರಣವೇ ತುಂಬಿದ್ದು ಗ್ರಾಮದ ರಸ್ತೆಗಳು ಕಳೆದುಂಬಿ, ಕನ್ನಡದ ಧ್ವಜಗಳು ಹಾರಾಡುತ್ತಿದ್ದವು. ರಸ್ತೆಗಳ ಅಕ್ಕಪಕ್ಕ ಹಾಗೂ ವೇದಿಕೆ ಬಳಿ ಬ್ಯಾನರ್, ಬಂಟಿAಗ್ಸ್ ರಾರಾಜಿಸಿ ಗ್ರಾಮ ಕನ್ನಡಮಯವಾಗಿ ಕಂಗೊಳಿಸಿತ್ತು.
ಮೆರವಣಿಗೆ ಸಾಗಿದ ದಾರಿಯುದ್ಧಕ್ಕೂ ಕನ್ನಡದ ಕಂಪು ಹರಡಿತು. ಹಳದಿ-ಕೆಂಪು ರಂಗಿನ ಕನ್ನಡದ ಬಾವುಟ ಹಿಡಿದವರು, ಶಲ್ಯವನ್ನು ಹೆಗಲಿಗೆರಿಸಿಕೊಂಡವರು, ವಿವಿಧ ಕಲಾ ತಂಡಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾದವು.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸಮ್ಮೇಳನದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆಯಲ್ಲಿ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಕಲಾತಂಡಗಳ ಮೂಲಕ ಗಮನ ಸೆಳೆದರೆ ಮತ್ತೊಂದು ಕಡೆ ಸಾರ್ವಜನಿಕರು ಮೆರವಣಿಗೆಯನ್ನು ಮೊಬೈಲ್ನಲ್ಲಿ ಸರೆ ಹಿಡಿಯುವಲ್ಲಿ ತಲ್ಲೀನರಾಗಿದ್ದರು.
ಸಮ್ಮೇಳನಕ್ಕೆ ಬಂದಿದ್ದ ಸಾಹಿತ್ಯಾಭಿಮಾನಿಗಳಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆಗೂ ಮುನ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಬೆಳಿಗ್ಗೆ ರಾಷ್ಟç ಧ್ವಜಾರೋಹಣವನ್ನು ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ ಹಾಗೂ ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋದ ಮಾಡಿದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಗೂ ಕನ್ನಡ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾಡಿದರು.
ಬಳಿಕ ಏಕಕಾಲದಲ್ಲಿ ದ್ವಾರಗಳ ಉದ್ಘಾಟನೆ ನಡೆಯಿತು. ಲೆಫ್ಟಿನೆಂಟ್ ಜನರಲ್ ಕೋದಂಡ ನಂಜಪ್ಪ ಸೋಮಣ್ಣ ದ್ವಾರವನ್ನು ಬೇಟೋಳಿ ಪಂಚಾಯಿತಿ ಸದಸ್ಯ ಟಿ. ಜೋಸೇಫ್, ಆರ್ಜಿ ಪಂಚಾಯಿತಿ ಸದಸ್ಯೆ ಫಾತೀಮಾ ಉದ್ಘಾಟಿಸಿದರು.
ಮೇಜರ್ ಜನರಲ್ ಸೋಮೆಯಂಡ ಕಾಳಪ್ಪ ಕಾರ್ಯಪ್ಪ (ಪೆರುಂಬಾಡಿ ಚೆಕ್ಪೋಸ್ಟ್) ಬಳಿ ದ್ವಾರವನ್ನು ಪಂಚಾಯಿತಿ ಸದಸ್ಯರಾದ ಎ.ಎಂ. ಬೋಪಣ್ಣ, ಪಿ.ಕೆ. ಗೀತಾ ಉದ್ಘಾಟಿಸಿದರು.
ಕೊಡಗಿನ ಗೌರಮ್ಮ ದ್ವಾರ, ಕೊಡಗಿನ ಪ್ರಥಮ ಮಹಿಳಾ ಸಾಹಿತಿ (ಕಂಡಿಮಕ್ಕಿ ದೇವಸ್ಥಾನಕ್ಕೆ ಹೋಗುವ ದಾರಿ) ದ್ವಾರವನ್ನು ಪಂಚಾಯಿತಿ ಸದಸ್ಯರಾದ ಪಿ.ಬಿ. ಚಂಗಪ್ಪ, ಆಲೀಮಾ ಉದ್ಘಾಟಿಸಿದರು.
ಹರದಾಸ ಅಪ್ಪಚ್ಚ ಕವಿ ದ್ವಾರ (ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರ)ವನ್ನು ಪಂಚಾಯಿತಿ ಸದಸ್ಯರಾದ ಲತಾ ಹಾಗೂ ಕವಿತಾ ಉದ್ಘಾಟಿಸಿದರೆ, ಐ. ಮಾ. ಮುತ್ತಣ್ಣ ಸಭಾಂಗಣ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುನೀತಾ, ರಂಜಿತ್ ಉದ್ಘಾಟಿಸಿದರು. ರಘುನಾಥ್ ನಾಯಕ್ ವೇದಿಕೆಯನ್ನು ಪಂಚಾಯಿತಿ ಸದಸ್ಯರಾದ ಸುಧೀಶ್, ಬೋಪಣ್ಣ ಉದ್ಘಾಟಿಸಿದರು.