ಮಡಿಕೇರಿ, ಜ. ೧೯: ಕ್ರೀಡಾ ತವರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿAದ ‘ಕ್ರೀಡಾ ಹಬ್ಬ’ದ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲೆಯ ಮೂಲೆಮೂಲೆಗಳಲ್ಲಿ ವೈವಿಧ್ಯಮಯ ಆಟೋಟಗಳು ಕ್ರೀಡಾಪ್ರೇಮಿಗಳಿಗೆ ರಸದೌತಣ ನೀಡುತ್ತಿವೆ. ವಿವಿಧ ಸಮುದಾಯಗಳು, ಸಂಘಟನೆಗಳು ಕ್ರೀಡಾಕೂಟಗಳ ಆಯೋಜನೆ ಮಾಡುವ ಮೂಲಕ ಕ್ರೀಡಾ ಕಲರವದ ರಂಗು ಹೆಚ್ಚಿಸಿವೆ. ಇದೀಗ ಜಿಲ್ಲೆಯ ಅತೀ ದೊಡ್ಡ ಫುಟ್ಬಾಲ್ ಟೂರ್ನಿಗೆ ಅಮ್ಮತ್ತಿ ಸಜ್ಜುಗೊಂಡಿದ್ದು, ರಾಷ್ಟçಮಟ್ಟದಲ್ಲಿ ಮನ್ನಣೆ ಗಳಿಸಿರುವ ಮಿಲನ್ಸ್ ಫುಟ್ಬಾಲ್ ಕ್ಲಬ್ ಇದರ ಆತಿಥ್ಯ ವಹಿಸಿದೆ.
ಕಲರವದ ರಂಗು ಹೆಚ್ಚಿಸಿವೆ. ಇದೀಗ ಜಿಲ್ಲೆಯ ಅತೀ ದೊಡ್ಡ ಫುಟ್ಬಾಲ್ ಟೂರ್ನಿಗೆ ಅಮ್ಮತ್ತಿ ಸಜ್ಜುಗೊಂಡಿದ್ದು, ರಾಷ್ಟçಮಟ್ಟದಲ್ಲಿ ಮನ್ನಣೆ ಗಳಿಸಿರುವ ಮಿಲನ್ಸ್ ಫುಟ್ಬಾಲ್ ಕ್ಲಬ್ ಇದರ ಆತಿಥ್ಯ ವಹಿಸಿದೆ.
(ಮೊದಲ ಪುಟದಿಂದ)
ಬಲಾಢ್ಯ ತಂಡಗಳ ಸೆಣಸಾಟ
ಇತ್ತೀಚಿಗಷ್ಟೆ ಫೀಫಾ ವಿಶ್ವಕಪ್ ಅನ್ನು ಸವಿದಿದ್ದ ಕ್ರೀಡಾಪ್ರಿಯರಿಗೆ ಈ ಪಂದ್ಯಾಟ ಇನ್ನಷ್ಟು ರೋಮಾಂಚನಗೊಳಿಸುವ ನಿರೀಕ್ಷೆ ಇದೆ. ದೇಶದ ವಿವಿಧ ಭಾಗದ ೧೬ ಬಲಾಢ್ಯ ತಂಡಗಳು ಪಂದ್ಯಾಟದಲ್ಲಿ ಮುಖಾಮುಖಿಗೊಳ್ಳುತ್ತಿದ್ದು, ಚುಮುಚುಮು ಚಳಿ, ಕೆಂದೂಳಿನ ನಡುವೆ ರೋಚಕ ಆಟ ಕಣ್ತುಂಬಿಕೊಳ್ಳುವುದು ನಿಶ್ಚಿತವಾಗಿದೆ.
ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಯುನೈಟೆಡ್ ಕಣ್ಣೂರು, ಕಲ್ಲುಬಾಯ್ಸ್ ಕಲ್ಲುಬಾಣೆ, ಕೊಡಗು ನೆಹರು ಎಫ್.ಸಿ., ತಮಿಳುನಾಡು ಇನ್ಕಮ್ ಟ್ಯಾಕ್ಸ್, ಸೆನ್ಸಾ ಎಫ್.ಸಿ. ಕೊಡಗು, ಯುನೈಟೆಡ್ ಎಫ್.ಸಿ. ಮಂಗಳೂರು, ವಿಜಯನಗರ ಎಫ್.ಸಿ. ಮೈಸೂರು, ಭಗವತಿ ಎಫ್.ಸಿ. ಕೊಡಗು, ಡೈನೋಮಸ್ ಕೇರಳ, ಯೇನೆಪೋಯ ಎಫ್.ಸಿ., ಜಿಎಸ್ಟಿ ತಮಿಳುನಾಡು, ಎ.ಜಿ.ಎಸ್. ತಿರುವನಂತಪುರA, ಕಿಕ್ಸ್ಟಾರ್ಟ್ ಎಫ್.ಸಿ. ಬೆಂಗಳೂರು. ಯುನೈಟೆಡ್ ಎಫ್.ಸಿ. ಎರ್ನಾಕುಲಂ, ಆಕ್ಸ್ಫರ್ಡ್ ಎಫ್.ಸಿ. ಕೊಡಗು ತಂಡಗಳು ಮಿಲನ್ಸ್ ಕಪ್ಗಾಗಿ ಸೆಣಸಾಟ ನಡೆಸಲಿವೆ. ಈ ತಂಡಗಳಲ್ಲಿ ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಮಿಂಚಿರುವ ಆಟಗಾರರು ಭಾಗವಹಿಸಲಿದ್ದಾರೆ.
ಮೊದಲ ದಿನ ಪಂದ್ಯಾವಳಿ ರಾತ್ರಿ ೭.೩೦ಕ್ಕೆ ಯುನೈಟೆಡ್ ಕಣ್ಣೂರು ಹಾಗೂ ಕಲ್ಲುಬಾಯ್ಸ್ ನಡುವೆ ನಡೆಯಲಿದ್ದು, ಪ್ರತಿ ದಿನ ಇದೇ ಸಮಯಕ್ಕೆ ಪಂದ್ಯಾಟ ನಡೆಯಲಿದೆ. ಜೊತೆಗೆ ಆಟಗಾರರಿಗೆ ಊಟ, ವಸತಿ, ಪ್ರಯಾಣ ಭತ್ಯೆಯನ್ನು ನೀಡಲಾಗುತ್ತಿದೆ. ವಿಜೇತ ತಂಡಕ್ಕೆ ರೂ. ೧.೫೦ ಲಕ್ಷ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ರೂ. ೧ ಲಕ್ಷ ಹಾಗೂ ಟ್ರೋಫಿ ಸೇರಿದಂತೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಉದ್ಘಾಟನಾ ಕಾರ್ಯಕ್ರಮ
ತಾ. ೨೦ ರಂದು (ಇಂದು) ಸಂಜೆ ೭.೩೦ ಕ್ಕೆ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ, ಭಾರತ ತಂಡದ ತಾಂತ್ರಿಕ ಸಮಿತಿ ಸಲಹೆಗಾರ ಐ.ಎಂ ವಿಜಯನ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲಚೀರ ಎ. ಅಯ್ಯಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ, ಕಾರ್ಮಾಡು ಗ್ರಾ.ಪಂ ಅಧ್ಯಕ್ಷ ನಿರನ್ ನಾಣಯ್ಯ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಪಾಣತ್ತಲೆ, ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಅಮ್ಮತ್ತಿ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಅಲ್ಲಾರಂಡ ದೀಪಕ್ ಅಪ್ಪಯ್ಯ ಸೇರಿದಂತೆ ಇನ್ನಿತರರ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ತಾ.೨೯ ರಂದು ನಡೆಯಲಿದೆ.
-ವರದಿ : ಹೆಚ್.ಜೆ. ರಾಕೇಶ್