ಮಡಿಕೇರಿ, ಜ. ೧೯ : ಕೊಡಗು ಜಿಲ್ಲೆ ಒಂದಲ್ಲಾ ಒಂದು ವಿಶೇಷತೆಗಳಿಗೆ, ಸದಾ ಸಾಕ್ಷಿಯಾಗುತ್ತಲೇ ಬರುತ್ತಿದೆ. ಅದರಲ್ಲೂ ಕ್ರೀಡೆಗೆ ಸಂಬAಧಿಸಿದAತೆ ಹತ್ತು ಹಲವಾರು ಕ್ರೀಡಾ ಸ್ಪರ್ಧೆಗಳು-ಕ್ರೀಡಾಕೂಟಗಳು ಜಿಲ್ಲೆಯಲ್ಲಿ ಆಯೋಜನೆಗೊಳ್ಳುತ್ತಿವೆ. ಇಂತಹ ಹಲವು ಕ್ರೀಡೆಗಳ ಸಾಲಿಗೆ ಇದೀಗ ಹೊಸತಾಗಿ ವಿಶಿಷ್ಟ ರೀತಿಯ ಕ್ರೀಡೆಯೊಂದು ಸೇರ್ಪಡೆಗೊಳ್ಳುತ್ತಿದೆ.
‘ಕ್ಯಾಟಪಳ್ಟ್’ (ರಬ್ಬರ್ ಬಿಲ್) ಎಂದರೆ ಎಲ್ಲರಿಗೂ ಗೊತ್ತು. ಈ ಹಿಂದಿನ ವರ್ಷಗಳಲ್ಲಿ ಸಾಮಾನ್ಯವಾಗಿ ಈ ರಬ್ಬರ್ ಬಿಲ್ ಬಹುಶಃ ಮಕ್ಕಳು, ಹಿರಿಯರು ಈ ರೀತಿಯಲ್ಲಿ ಎಲ್ಲರ ಕೈಯ್ಯಲ್ಲಿ ಕಂಡುಬರುತ್ತಿತ್ತು. ಆಧುನೀಕತೆ ಬೆಳೆದು ಬಂದAತೆ ಇದೂ ಮರೆಯಾಗುತ್ತಾ ಬಂದಿತ್ತು. ಗುರಿ ಇಡುವುದರಲ್ಲಿ ಇದು ಗಮನ ಸೆಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಕಾಯಿಗೆ ಗುಂಡು ಹಾರಿಸುವ ಸ್ಪರ್ಧೆ ಭಾರೀ ಜನಪ್ರಿಯಗೊಳ್ಳುತ್ತಿವೆ. ಜಿಲ್ಲೆಯಾದ್ಯಂತ ತೋಕ್ನಮ್ಮೆ ಸಹಿತವಾಗಿ ತೆಂಗಿನ ಕಾಯಿಗೆ ಗುರಿಯಿಡುವುದು, ಕೋಳಿ ಮೊಟ್ಟೆಗೆ ಗುರಿಯಿಡುವ ಸ್ಪರ್ಧೆ ಆಕರ್ಷಣೆ ಪಡೆಯುತ್ತಿವೆ. ಇದೀಗ ಮತ್ತೊಂದು ಕ್ರೀಡೆಯಾಗಿ ‘ಕ್ಯಾಟ್ಪಳ್ಟ್’ (ರಬ್ಬರ್ ಬಿಲ್) ಮೂಲಕ ಗುರಿಯಿಡುವ ಸ್ಪರ್ಧೆ ಪ್ರಪ್ರಥಮ ಬಾರಿಗೆ ಆಯೋಜಿತವಾಗಿದೆ.
ಕಕ್ಕಬೆಯ ‘ಸ್ಟೆಪ್ಸ್’ ಸಂಸ್ಥೆಯ ಪ್ರಮುಖರಾಗಿರುವ ಮಡಿಕೇರಿ ತಾ.ಪಂ.ನ ಮಾಜಿ ಉಪಾಧ್ಯಕ್ಷರಾದ ಬೊಳಿಯಾಡಿರ ಸಂತು ಸುಬ್ರಮಣಿ ಹಾಗೂ ಸ್ನೇಹಿತರು ಈ ಸ್ಪರ್ಧೆ ಏರ್ಪಡಿಸಿದ್ದಾರೆ.
(ಮೊದಲ ಪುಟದಿಂದ) ಫೆಬ್ರವರಿ ೨೬ ರಂದು ಕಕ್ಕಬೆಯ ಪ್ರೌಢಶಾಲಾ ಮೈದಾನದಲ್ಲಿ ಈ ಸ್ಪರ್ಧೆ ಜರುಗಲಿದೆ. ರಾಜ್ಯಮಟ್ಟದ ಮುಕ್ತ ಸ್ಪರ್ಧೆ ಇದಾಗಿದ್ದು, ೧೮ ವರ್ಷದೊಳಗಿನ ಒಂದು ವಿಭಾಗ ಹಾಗೂ ೧೮ ವರ್ಷ ಮೇಲ್ಪಟ್ಟವರ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಪುರುಷರು, ಮಹಿಳೆಯರು, ಮಕ್ಕಳು ಈ ವಿಭಾಗದಲ್ಲಿ ಮುಕ್ತವಾಗಿ ಸ್ಪರ್ಧಿಸಬಹುದಾಗಿದೆ. ಈಗಾಗಲೇ ೨೦೦ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊAಡಿದ್ದಾರೆ. ವಿಜೇತರಿಗೆ ನಗದು ಹಾಗೂ ಟ್ರೋಫಿ ಬಹುಮಾನವಾಗಿ ನೀಡಲಾಗುವುದು ಎಂದು ಸಂತು ಸುಬ್ರಮಣಿ ಅವರು ತಿಳಿಸಿದ್ದಾರೆ.
ನಿಗದಿತ ಟಾರ್ಗೆಟ್ಗೆ ೨೫ ಮೀಟರ್ ಅಂತರದಲ್ಲಿ ಸ್ಪರ್ಧಿಗಳು ಗುರಿಯಿಡಬಹುದಾಗಿದೆ. ಇದೂ ಒಂದು ರೀತಿಯ ದೇಶೀಯ ಕ್ರೀಡೆಯಾಗಿದೆ. ರಬ್ಬರ್ ಬಿಲ್ಲ್ ಅನ್ನು ಬೇಟೆಯ ರೀತಿಯಲ್ಲಿ ಬಳಸದೆ ಗುರಿಯಿಡುವ ಸ್ಪರ್ಧೆಯಾಗಿ ಜನಪ್ರಿಯಗೊಳಿಸುವ ಚಿಂತನೆ ಇದಾಗಿದೆ. ಪ್ರಸ್ತುತ ದುಬಾರಿ ಬೆಲೆಯ ‘ಕ್ಯಾಟಪಳ್ಟ್’ಗಳೂ ಮಾರುಕಟ್ಟೆಗೆ ಬಂದಿದ್ದು, ಹಲವಾರು ಮಂದಿ ಇದರ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಸಂತು ಸುಬ್ರಮಣಿ ಅಭಿಪ್ರಾಯಪಟ್ಟರು. -ಶಶಿ ಸೋಮಯ್ಯ