(ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜ. ೧೯ : ಕೊಡಗಿನಲ್ಲಿ ಅತ್ಯುತ್ತಮ ಆಡಳಿತ ಮಂಡಳಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೊಡಗಿನ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಂಘದ ಸದಸ್ಯರಿಗೆ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಘದ ಆವರಣದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಹಾಗೂ ಜಿಮ್ ವ್ಯವಸ್ಥೆಯನ್ನು ಕಲ್ಪಿಸಿದೆ. ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಇಂತಹ ಯೋಜನೆ ಅನುಷ್ಠಾನಗೊಂಡಿರುವುದು ಹೆಮ್ಮೆಯ ವಿಚಾರ.
೧೯೭೬ರಲ್ಲಿ ಹಲವು ಸದಸ್ಯರಿಂದ ಆರಂಭಗೊAಡ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇಂದಿಗೆ ೪೭ ವರ್ಷಗಳನ್ನು ಪೂರೈಸಿದೆ. ೨೦೦೮ರಿಂದ ಸಂಘದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಇಲ್ಲಿನ ಹಾಲಿ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ, ನಂತರದ ವರ್ಷಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗಿದ ಸಂಘವು ಸದಸ್ಯರಿಗೆ ಬೇಕಾದ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಜನಮನ್ನಣೆಗಳಿಸಿದೆ.
ಹಾತೂರುವಿನಲ್ಲಿ ಗ್ರಾಮೀಣ ಬ್ಯಾಂಕೊAದು ಸ್ಥಳಾಂತರಗೊAಡ ನಂತರ ಈ ಭಾಗದ ಸುತ್ತಮುತ್ತಲಿನ ರೈತರಿಗೆ, ನಾಗರಿಕರಿಗೆ ತೀವ್ರ ಅಡಚಣೆ ಉಂಟಾಗಿತ್ತು ಈ ಹಿನ್ನೆಲೆಯಲ್ಲಿ ಸಹಕಾರ ಸಂಘದ ವತಿಯಿಂದ ಬ್ಯಾಂಕ್ನ್ನು ಆರಂಭಿಸಿ ಇಲ್ಲಿಯ ಜನತೆಗೆ ಅನುಕೂಲ ಕಲ್ಪಿಸಲಾಗಿತ್ತು. ಇದರಿಂದ ಸಂಘದ ೧೧೦೦ ಸದಸ್ಯರಿಗೆ ಅನುಕೂಲವಾಯಿತು. ಅಲ್ಲದೆ ರೈತರಿಗೆ ಬೇಕಾದ ಸಾಲ ಸೌಲಭ್ಯ ಸೇರಿದಂತೆ ಕೃಷಿ ಪರಿಕರಗಳು, ರಸಗೊಬ್ಬರಗಳು ಇನ್ನಿತರ ಮೂಲಭೂತ ಅವಶ್ಯಕತೆಗಳನ್ನು ಸಂಘದ ಸದಸ್ಯರಿಗೆ ನೀಡಲು ಮುಂದೆ ಬಂದಿದೆ. ೨೦೦೮ರಲ್ಲಿ ೪.೭೫ ಕೋಟಿ ವ್ಯವಹಾರ ನಡೆಸಿ ಇಂದಿಗೆ ೮೬ ಕೋಟಿ ವಹಿವಾಟಿನಲ್ಲಿ ಮುಂದೆ ಬಂದಿದೆ. ನಾಲ್ಕು ಬಾರಿ ಡಿಸಿಸಿ ಬ್ಯಾಂಕಿನಿAದ ನೀಡುವ ಪ್ರಶಸ್ತಿಗೆ ಸಂಘವು ಭಾಜನವಾಗಿದೆ.
ಬ್ಯಾಡ್ಮಿಂಟನ್ ಕ್ರೀಡಾಂಗಣ
ಸಾರ್ವಜನಿಕರಿಗೆ ಹಾಗೂ ಸಂಘದ ಸದಸ್ಯರಿಗೆ
(ಮೊದಲ ಪುಟದಿಂದ) ಉತ್ತಮ ಸೌಲಭ್ಯ ನೀಡುವ ಸಲುವಾಗಿ ಸಂಘವು ೪೫ ಲಕ್ಷ ವೆಚ್ಚದಲ್ಲಿ ಸಂಘದ ಆವರಣದಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಿ ಇದರಲ್ಲಿ ಗ್ರಾಮದ ಜನತೆಗೆ, ವಿದ್ಯಾರ್ಥಿಗಳಿಗೆ, ಸಂಘದ ಸದಸ್ಯರಿಗೆ ದಿನನಿತ್ಯ ಅಭ್ಯಾಸ ನಡೆಸಲು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಆಡಳಿತ ಮಂಡಳಿಯು ಸರ್ವಾನುಮತದಿಂದ ಇಂತಹ ನಿರ್ಧಾರವನ್ನು ಕೈಗೊಂಡಿದೆ.
ಒಳಾಂಗಣ ಕ್ರೀಡಾಂಗಣವು ೭೦ ಅಡಿ ಉದ್ದವಿದ್ದು, ೪೦ ಅಡಿ ಅಗಲ ಹೊಂದಿದೆ. ೩೦ ಅಡಿ ಎತ್ತರವಿದ್ದು ಕ್ರೀಡಾಪಟುಗಳಿಗೆ ಅತ್ಯಾಧುನಿಕ ಶೈಲಿಯಲ್ಲಿ ಬೇಕಾದ ನೆಲದ ಹಾಸನ್ನು ಮರದಿಂದ ಮಾಡಲಾಗಿದೆ. ಸುಸಜ್ಜಿತ ಶೈಲಿಯಲ್ಲಿ ದೇಶಿಯ ಮಟ್ಟದಲ್ಲಿ ಇರುವ ಸವಲತ್ತುಗಳನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಒಳಾಂಗಣ ಸುತ್ತಲೂ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಕ್ರೀಡೆಗೆ ಬರುವ ಆಸಕ್ತರಿಗೆ ವ್ಯಾಯಾಮ ಮಾಡಲು ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊಡಗಿನ ಸಹಕಾರ ಕ್ಷೇತ್ರದಲ್ಲಿ ಹಾತೂರು ಕೃಷಿ ಪತ್ತಿನ ಸಹಕಾರ ಸಂಘವು ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಸಾರ್ವಜನಿಕವಾಗಿ ಸಹಕಾರಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಈ ಸಂಘಕ್ಕೆ ಸಲ್ಲಬೇಕಾಗಿದೆ. ಆಡಳಿತ ಮಂಡಳಿಯ ದೂರದೃಷ್ಟಿ ಆಲೋಚನೆಯಿಂದ ಈ ರೀತಿಯ ವ್ಯವಸ್ಥೆಯನ್ನು ಸಂಘದ ಆವರಣದಲ್ಲಿ ಕಲ್ಪಿಸಲಾಗಿದೆ.
ಇಲ್ಲಿ ಸಿಗುವ ಸೌಲಭ್ಯವು ಕೇವಲ ಸಹಕಾರ ಸಂಘದ ಸದಸ್ಯರಿಗೆ ಮಾತ್ರ ಸೀಮಿತಗೊಳಿಸದೆ ಗ್ರಾಮದ ಜನತೆಗೆ, ಸುತ್ತಮುತ್ತಲಿನ ಜನತೆಗೆ ಅವಕಾಶ ಕಲ್ಪಿಸಿದೆ. ವಾರದ ಶನಿವಾರ ಹಾಗೂ ಭಾನುವಾರದಂದು ೫ ವರ್ಷ ಮೇಲ್ಪಟ್ಟು ೨೧ ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ನುರಿತ ಅನುಭವಿ ತರಬೇತುದಾರರನ್ನು ನೇಮಕಗೊಳಿಸಿ ಇವರಿಂದ ವಿದ್ಯಾರ್ಥಿಗಳಿಗೆ ಕ್ರೀಡಾಸಕ್ತಿ ಮೂಡಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘವು ಕ್ರೀಡೆಗೆ ಒತ್ತು ನೀಡುವ ಮೂಲಕ ಒಳಾಂಗಣ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಿಸಿ ಸಾರ್ವಜನಿಕವಾಗಿ ಅನುಕೂಲ ಕಲ್ಪಿಸಿದೆ. ತಾ.೨೫ರಂದು ಒಳಾಂಗಣ ಕ್ರೀಡಾಂಗಣ ಹಾಗೂ ಜಿಮ್ ಲೋಕಾರ್ಪಣೆಯಾಗಲಿದೆ.