ಮಡಿಕೇರಿ, ಜ. ೧೯: ಭಾರತೀಯ ಜನತಾ ಪಾರ್ಟಿ ಹಾಗೂ ಜಿಲ್ಲಾ ಹಾಗೂ ಗ್ರಾಮಾಂತರ ವೃತ್ತಿಪರ ಪ್ರಕೋಷ್ಠದ ವತಿಯಿಂದ ತಾ.೨೨ರಂದು ಮರಗೋಡಿನಲ್ಲಿ ಉಚಿತ ವೈದÊಕೀಯ ಮತ್ತು ಶಸ್ತçಚಿಕಿತ್ಸಾ ಹಾಗೂ ದಂತ ಶಿಬಿರ ಏರ್ಪಡಿಸಲಾಗಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ. ಮೋಹನ್ ಅಪ್ಪಾಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ೯ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರ ನಡೆಯಲಿದೆ. ಉಚಿತವಾಗಿ ವೈದ್ಯಕೀಯ, ದಂತ ತಪಾಸಣೆಯೊಂದಿಗೆ ತಜ್ಞರು ಸಮಾಲೋಚನೆಗೂ ಲಭ್ಯರಿರುತ್ತಾರೆ. ಅವಶ್ಯವಿದ್ದವರಿಗೆ ಚಿಕಿತ್ಸೆ ನೀಡಲಾಗುವದು. ಉಚಿತವಾಗಿ ಶ್ರವಣ ತಪಾಸಣೆ ಕೂಡ ಮಾಡಲಿದ್ದು, ಅಗತ್ಯವಿರುವವರಿಗೆ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಶಸ್ತçಚಿಕೆತ್ಸೆ ಮಾಡಿಸಿಕೊಡಲಾಗುವುದು. ಮೂತ್ರ ಶಾಸ್ತçಜ್ಞ ಹಾಗೂ ಸ್ತಿçÃರೋಗ ತಜ್ಞರಿಂದ ಉಚಿತ ಸಮಾಲೋಚನೆ ಕೂಡ ಮಾಡುವ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.
ಇದರೊಂದಿಗೆ ಗಂಡು ಮತ್ತು ಹೆಣ್ಣು ಬಂಜೆತನಕ್ಕೆ ಉಚಿತ ಸಲಹೆ ನೀಡಲಾಗುವದು. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳಿಗೆ ಉಚಿತವಾಗಿ ಮೂಲ ಔಷಧಿ ಹಾಗೂ ರೋಗ ನಿರೋಧಕ ಪಾನೀಯ ನೀಡಲಾಗುವದೆಂದು ತಿಳಿಸಿದರು. ಹೆಚ್ಚಿನ ವಿವರ ಹಾಗೂ ನೇಮಕಾತಿಗಾಗಿ ತಾ.೨೦ರಂದು ಬೆಳಿಗ್ಗೆ ೧೦ರಿಂದ ಸಂಜೆ ೬ಗಂಟೆ ಒಳಗಡೆ ಮೊ.೮೭೯೨೮೭೪೦೩೦, ೮೯೭೦೧೪೧೫೧೬ ಅನ್ನು ಸಂಪರ್ಕಿಸಬಹುದಾಗಿದೆ. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಹಳೆಯ ವೈದ್ಯಕೀಯ ವರದಿಗಳಿದ್ದಲ್ಲಿ ಹಾಗೂ ಲಸಿಕಾಕರಣದ ಸರ್ಟಿಫಿಕೇಟ್ ತರಬೇಕಾಗಿದೆ ಎಂದು ಮೋಹನ್ ಅಪ್ಪಾಜಿ ತಿಳಿಸಿದರು.
ಗೋಷ್ಠಿಯಲ್ಲಿ ಸಹಾಯಕ ಸಂಚಾಲಕ ಮನೋಜ್, ಗ್ರಾಮಾಂತರ ಪ್ರಕೋಷ್ಠದ ಸಂಚಾಲಕ ಎಂ.ಎA.ಗಣಪತಿ, ಸಹ ಸಂಚಾಲಕರುಗಳಾದ ಗುರುಕೃಷ್ಣ, ರಾಜೇಶ್, ನಗರ ಸಹ ಸಂಚಾಲಕ ಮಂಜುನಾಥ್ ಇದ್ದರು.