ಮಡಿಕೇರಿ, ಜ. ೧೯: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಾಪೋಕ್ಲು ಶಾಖೆ ತಾ.೨೩ರಿಂದ ಆರಂಭಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಂ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು; ನಾಪೋಕ್ಲುವಿನ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್ನಲ್ಲಿ ತೆರೆಯಲಾಗಿರುವ ಶಾಖೆಯನ್ನು ತಾ.೨೩ರಂದು ಬೆಳಿಗ್ಗೆ ೧೧ಗಂಟೆಗೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸುವರು. ಭದ್ರತಾ ಕೊಠಡಿಯನ್ನು ಪ್ರಾಥÀಮಿಕ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಉದ್ಘಾಟಿಸುವರು. ಗಣಕೀಕರಣವನ್ನು ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್. ಕೃಷ್ಣಪ್ರಸಾದ್ ಉದ್ಘಾಟಿಸಲಿದ್ದು, ಪ್ರಥಮ ಪಾಲು ಪತ್ರವನ್ನು ನಾಪೋಕ್ಲು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಪ್ರಥಮ ಠೇವಣಿ ಪತ್ರವನ್ನು ಸರ್ವೋದಯ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಅಂಬೆಕಲ್ಲು ವಿತರಣೆ ಮಾಡುವರು. ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕ ಎ.ಕೆ. ನವೀನ್ ಅಪ್ಪಯ್ಯ ಉಪಸ್ಥಿತರಿರುವರೆಂದು ತಿಳಿಸಿದರು.
೧೯೯೭ರಲ್ಲಿ ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ೪೩೫ ಮಂದಿ ಜನರಿಂದ ಪ್ರಾರಂಭಗೊAಡ ಸಂಘದಲ್ಲಿ ಪ್ರಸ್ತುತ ೧೬,೧೯೬ ಸದಸ್ಯರಿದ್ದು, ೪.೦೬ ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ. ರೂ. ೧೫೦ ಕೋಟಿಗೂ ಮಿಕ್ಕಿ ಠೇವಣಿಯಿದ್ದು, ರೂ. ೧೩೬ ಕೋಟಿಗೂ ವಿವಿಧ ಸಾಲಗಳನ್ನು ವಿತರಿಸಲಾಗಿದೆ. ಪ್ರಾರಂಭದಿAದಲೂ ಲಾಭದಲ್ಲಿ ನಡೆಯುತ್ತಿದ್ದು, ೨೧-೨೨ನೇ ಸಾಲಿಗೆ ರೂ.೧.೨೦ ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ. ೧೫ ರಷ್ಟು ಡಿವಿಡೆಂಡ್ ನೀಡಲಾಗಿದೆ. ವಾರ್ಷಿಕ ರೂ. ೬೫೦ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಲಾಗಿದೆ. ಸದಸ್ಯರುಗಳ ಅನುಕೂಲಕ್ಕಾಗಿ ಇ-ಸ್ಟಾಂಪಿAಗ್, ಮಲ್ಟಿಸಿಟಿ ಚೆಕ್/ಡಿಡಿ ಸೌಲಭ್ಯ, ಆರ್‌ಟಿಜಿಎಸ್/ನೆಫ್ಟ್ ಸೌಲಭ್ಯ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ೧೭ ಶಾಖೆಗಳನ್ನು ಹೊಂದಿದ್ದು, ೧೮ನೇ ಶಾಖೆಯಾಗಿ ನಾಪೋಕ್ಲುವಿನಲ್ಲಿ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ವರ್ಷ ಸಂಘಕ್ಕೆ ೨೫ ವರ್ಷಗಳಾಗುತ್ತಿದ್ದು, ಇದರ ಅಂಗವಾಗಿ ೨೫ ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಜನರಲ್ಲಿ ಉಳಿತಾಯ ಮನೋಭಾವನೆ ಮೂಡಿಸುವುದು, ಕೃಷಿಕರು, ವ್ಯಾಪಾರಸ್ಥರಿಗೆ ಸಾಲ ಒದಗಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದವರ ಪ್ರಗತಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ೨೦೧೮ರಲ್ಲಿ ವಿಕೋಪ ಸಂಭವಿಸಿದ ಸಂದರ್ಭ ಸುಮಾರು ೧೦೧ ಸದಸ್ಯರಿಗೆ ರೂ. ೮ ಲಕ್ಷದವರೆಗೆ ನೆರವು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷ ಮೋಹನ್‌ರಾಂ ಸುಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ, ಮಡಿಕೇರಿ ಶಾಖಾ ವ್ಯವಸ್ಥಾಪಕ ಬಿ. ಅಶೋಕ, ಸಲಹಾ ಸಮಿತಿ ಸದಸ್ಯ ನವೀನ್ ಅಂಬೆಕಲ್ ಉಪಸ್ಥಿತರಿದ್ದರು.