ಚೆಟ್ಟಳ್ಳಿ, ಜ. ೧೮: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಇತ್ತೀಚೆಗೆ ನವೀಕರಣ ಬಹ್ಮಕಲಶಾಭಿಷೇಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಿವ ಸುಬ್ರಮಣ್ಯ ಭಟ್ ಶುಳುವಾಲಮೂಲೆ ತಂತ್ರಿಗಳ ಮಾರ್ಗದರ್ಶನದೊಂದಿಗೆ ೧೨ ವರ್ಷಗಳ ನಂತರ ದೇವಾಲಯದ ಹಲವು ನವೀಕರಣ ಕಾರ್ಯ ಗಳೊಂದಿಗೆ ಬಹ್ಮಕಲಶಾ ಭಿಷೇಕ ನಡೆಯಿತು. ತಾ. ೧೦ರ ಸಂಜೆ ತಂತ್ರಿಗಳ ಆಗಮನದೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಶಿವ ಸುಬ್ರಮಣ್ಯ ಭಟ್ ಶುಳುವಾಲಮೂಲೆ ತಂತ್ರಿಗಳ ಮುಂದಾಳತ್ವದಲ್ಲಿ ಪೂರ್ಣ ಕುಂಭ ಸ್ವಾಗತ ನಡೆದು ಸಂಜೆ ೫.೩೦ಕ್ಕೆ ಸಪ್ತ ಶುದ್ಧಿ, ಪುಣ್ಯಾಹ, ದೇವತಾ ಪ್ರಾರ್ಥನೆ, ಋತ್ಯವರಣ, ಗೋನಿ ವಾಸ, ರಾಕ್ಷೋಘ್ನ ಹವನ, ವಾಸ್ತು ಪೂಜೆ, ವಾಸ್ತು ಹವನ, ವಾಸ್ತುಬಲಿ, ಪ್ರಸಾದ ವಿತರಣೆ, ಅನ್ನಸಂತರಪಣೆ ನಡೆಯಿತು. ತಾ. ೧೧ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹವನ, ರುದ್ರಾಭಿಷೇಕ, ಪುರಾಣ ಪಾರಾಯಣ, ನವಕಲಶ ಪ್ರತಿಷ್ಠೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ ೫ಕ್ಕೆ ಬ್ರಹ್ಮ ಕಲಶ ಪ್ರತಿಷ್ಠೆ, ಅಧಿವಾಸ ಹವನ, ದುರ್ಗಾ ಪೂಜೆ, ಚಂಡಿಕಾ ಹವನ, ಅಷ್ಠಾವಧಾನ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನೆರವೇರಿತು. ತಾ. ೧೨ ರಂದು ಬೆಳಿಗ್ಗೆ ೬ ಗಂಟೆಗೆ ಪ್ರತಿಷ್ಠಾನ ಹವನ, ಪುರಾಣ ಪಾರಾಯಣ, ಪವಮಾನ ಹವನ ಪೂರ್ಣಾಹುತಿ ೧೦.೪೦ ಗಂಟೆಗೆ ಮಹಾಗಣಪತಿ ಸಹಿತ ಅಯ್ಯಪ್ಪ ಸ್ವಾಮಿಗೆ ಬ್ರಹ್ಮ ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಅಶ್ವತ್ಥ ನಾರಾಯಣ ಪೂಜೆ, ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಂತ್ರಾಕ್ಷತೆ ನಡೆಯಿತು.