ಸುಂಟಿಕೊಪ್ಪ, ಜ.೧೮ : ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಟೋ ಸಂಪೂರ್ಣ ವಾಗಿ ಸುಟ್ಟು ಹೋಗಿದ್ದು ಚಾಲಕ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸುಂಟಿಕೊಪ್ಪ ಆಟೋ ಚಾಲಕ ಶಿವರಾಜ್ ಎಂಬಾತನಿಗೆ ಸೇರಿದ ಆಟೋರಿಕ್ಷಾದಲ್ಲಿ ಸುಂಟಿಕೊಪ್ಪದಿAದ ರಾತ್ರಿ ೯. ಗಂಟೆಗೆ ಅಂದಗೋವೆಯಲ್ಲಿರುವ ಮನೆಗೆ ತೆರಳುತ್ತಿರುವಾಗ ಮಾರ್ಗ ಮಧ್ಯದ ತಿಲಕ ಎಸ್ಟೇಟ್ ಬಳಿ ಚಾಲಕ ಸೀಟು ಹಿಂಬAದಿಯಲ್ಲಿ ಬಿಸಿಯಾಗಲಾರಂಬಿಸಿದ್ದು ಆಟೋವನ್ನು ನಿಲ್ಲಿಸಿ ಕೆಳಗಿಳಿದು ನೋಡಲಾಗಿ ಇಂಜಿನ್ನ ಸೆನ್ಸಾರ್ನಲ್ಲಿ ಬೆಂಕಿ ಕಾಣಿಸಿಕೊಂಡು ಜ್ವಾಲೆಯ ಪ್ರಮಾಣವು ಅಧಿಕಗೊಂಡಿದ್ದು ಕೂಡಲೇ ಚಾಲಕ ಆಟೋವನ್ನು ನಿಲ್ಲಿಸಿ ಅನತಿದೂರಕ್ಕೆ ತೆರಳಿದ್ದಾರೆ. ಅಗ್ನಿಯ ಜ್ವಾಲೆಗೆ ಸಿಲುಕಿದ ಆಟೋರಿಕ್ಷಾವು ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ.