ವೀರಾಜಪೇಟೆ, ಜ. ೧೯: ಸಮಾಜವು ವೈದ್ಯರ ಸೇವೆಯು ದೇವರ ಸೇವೆ ಎಂದು ನಂಬಿಕೊAಡು ಸಾಗುತ್ತಿದೆ.ಸಮಾಜಕ್ಕೆ ಉತ್ತಮ ಸೇವೆ ಕಲ್ಪಿಸುವುದು ಸಮಾನ್ಯ ವೈದ್ಯನ ಬಹುಮುಖ್ಯ ಕರ್ತವ್ಯವಾಗಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ವೀರಾಜಪೇಟೆಯಲ್ಲಿ ಅಂತಿಮ ವರ್ಷ ಪೂರೈಸಿದ ವಿಧ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಪತ್ರ ವಿತರಿಸಿ ಮಾತನಾಡಿದ ಡಾ. ರಮೇಶ್ ಅವರು ವಿದ್ಯಾರ್ಥಿ ಜೀವನದಲ್ಲಿ ಪದವಿ ಪಡೆದುಕೊಳ್ಳುವ ದಿನವು ಸಾಮಾಜಿಕ ಜೀವನದ ಮೈಲಿಗಲ್ಲು. ಈ ನಿಟ್ಟಿನಲ್ಲಿ ಕೊಡಗು ದಂತ ಮಹಾವಿದ್ಯಾಲಯವು ಗುರುಕುಲದ ಮಾದರಿಯಲ್ಲಿ ಮೌಲ್ಯಯುತವಾದ ಶಿಕ್ಷಣವನ್ನು ಒದಗಿಸಿದೆ. ವೈದ್ಯನಾದವನು ರೋಗಿಗಳನ್ನು ಹಸನ್ಮುಖಿಯಾಗಿ ಸ್ವಾಗತಿಸಬೇಕು ಹಾಗೂ ರೋಗಿಯ ಚಿಕಿತ್ಸಾವಿಧಿಗಳನ್ನು ಅನುಸರಿಸಬೇಕು. ಸಮಾಜವು ನಮಗೆ ಹಲವು ಉತ್ತಮ ವ್ಯಾವಹಾರಿಕ, ಆರೋಗ್ಯಕರ, ಹಿತವಾದ ಸ್ವಸ್ಥ ಪ್ರಾಕೃತಿಕ ಜಗತ್ತನ್ನು ಕಲ್ಪಿಸಿದೆ. ಇಂತಹ ಸಮಾಜಕ್ಕೆ ದ್ರೋಹ ಬಗೆಯದೆ ಉತ್ತಮ ಸೇವೆಯನ್ನು ನೀಡುವುದರೊಂದಿಗೆ ತಮ್ಮ ಗೌರವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಸಮಾರಂಭದ ಅಧÀ್ಯಕ್ಷತೆ ವಹಿಸಿ ಮಾತನಾಡಿ, ಹೊಂದಾಣಿಕೆ ಮತ್ತು ಅಳವಡಿಕೆ ಜೀವನದ ಪರಿಪಾಠವಾಗಬೇಕು. ವೈದ್ಯರ ಬಳಿ ಬರುವ ವ್ಯಕ್ತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದುವರೆಯುವುದು ಪ್ರಸ್ತುತ ಕಾಲಗಟ್ಟಕ್ಕೆ ಅಗತ್ಯವಾಗಿದೆ. ವಿಧ್ಯಾರ್ಥಿ ಜೀವನವು ಪದವಿ ಪಡೆದ ನಂತರ ಕೊನೆಯಾಗಲಿದೆ. ಆದರೆ, ಜೀವನದಲ್ಲಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಮುಂದಾಗುವುದು ಮುಖ್ಯ. ರೋಗಿಯ ರೋಗ ಬಗ್ಗೆ ಅಧ್ಯಯನ ನಡೆಸಿ ರೋಗದ ಗುಣಲಕ್ಷಣಗಳನ್ನು ಕಲಿಯುವುದರೊಂದಿಗೆ ಚಿಕಿತ್ಸೆಗೆ ಅಣಿಯಾಗಬೇಕು. ಕಾಲೇಜಿನ ಪರಿಸರ ಕಲಿಯು ವಿದ್ಯೆ ಕಲಿಕೆಗೆ ಮಾತ್ರ. ಆದರೆ ಸಮಾಜದಿಂದ ಕಲಿಯುವ ವಿದೆೆ್ಯ ಜೀವನ ಪರಿಯಂತ ಅನ್ವಯವಾಗಲಿದೆ. ಭವಿಷ್ಯದ ವೈದ್ಯರುಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸಿ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ೫೦ ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಪತ್ರ ಮತ್ತು ೩೫ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳನ್ನು ವಿತರಿಸಲಾಯಿತು. ಡಾ.ಸುನೀಲ್ ಮುದ್ದಯ್ಯ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟ ಚಿನ್ನದ ಪದಕವನ್ನು ಡಾ. ಶಾನ್ವಿ ಪೊನ್ನಮ್ಮ ಅವರು ಪಡೆದುಕೊಂಡರು. ಕಂಜಿತAಡ ಎಂ.ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಜೆ. ಜಯಲಕ್ಷ್ಮೀ ತನ್ನದಾಗಿಸಿಕೊಂಡರು. ಎಲ್ಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗಾಗಿ ಮೀಸಲಿಟ್ಟ ಕೆ.ಪೊನ್ನಮ್ಮ ಕುಶಾಲಪ್ಪ ಚಿನ್ನದ ಪದಕವನ್ನು ಡಾ. ಕಂಜಿತAಡ ಕುಶಾಲಪ್ಪ ಮುದ್ದಯ್ಯ ಅವರು ಪಡೆದುಕೊಂಡರು. ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ರಮೇಶ್ ಅವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಪದಕಗಳನ್ನು ವಿತರಿಸಿದರು.

ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಜಿತೇಶ್ ಜೈನ್ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿಧ್ಯಾರ್ಥಿಗಳಿಂದ ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶಿಧರ್ ಮತ್ತು ಡಾ. ಶಾಂತಲ ಬಿ.ಎಂ ಅವರು ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ.ಶಶೀಧರ್. ವಿದ್ಯಾರ್ಥಿಗಳಾದ ಪ್ರತೀಕ್ಷಾ ಮತ್ತು ಕುಂಕುA ನಾಣಯ್ಯ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಂಕುA ನಾಣಯ್ಯ ಅವರು ಸರ್ವರನ್ನು ವಂದಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಸಿ. ಪೊನ್ನಪ್ಪ, ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಂಸ್ಥಾಪಕರು ಮತ್ತು ಪ್ರಮುಖರಾದ ಕೆ.ಕೆ.ಅಯ್ಯಪ್ಪ ಸೇರಿದಂತೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು, ಪೊಷಕರು ಹಾಜರಿದ್ದರು.