ಭಾಗಮಂಡಲ, ಜ. ೧೮: ತಲಕಾವೇರಿಯಲ್ಲಿ ಇರಿಸಲ್ಪಟ್ಟಿರುವ ಹಳೆಯ ಶಿವಲಿಂಗವನ್ನು ಆಗಮ ಪಂಡಿತರು ಇಂದು ಪರಿಶೀಲಿಸಿದರು.
ಈ ಹಿಂದಿನ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯು ಪುನರ್ ಪ್ರತಿಷ್ಠಾಪನೆ ಸಂದರ್ಭ ಗರ್ಭಗುಡಿಯಲ್ಲಿ ಭೂಗತವಾಗಿದ್ದ ಹಳೆಯ ಶಿವಲಿಂಗವನ್ನು ಅಷ್ಟಮಂಗಲ ಪ್ರಶ್ನೆ ಹಿನ್ನೆಲೆಯಲ್ಲಿ ತೆಗೆದಿರಿಸಿತ್ತು. ಭಗ್ನಗೊಂಡಿರುವ ಈ ಶಿವಲಿಂಗವನ್ನು ಇಂದು ಧಾರ್ಮಿಕ ದತ್ತಿ ಇಲಾಖೆಯ ಶೈವಾಗಮ ಪಂಡಿತರಾದ ಚಂದ್ರಶೇಖರ್ ಅವರು ಪರಿಶೀಲಿಸಿದರು. ಅವರೊಂದಿಗೆ ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಆಗಮ ಪಂಡಿತರಾಗಿದ್ದು, ನಿವೃತ್ತರಾಗಿರುವ ಗಣಪತಿ ಶಾಸ್ತಿç ಅವರು ಆಗಮಿಸಿ ಪರಿಶೀಲಿಸಿದರು.