ವೀರಾಜಪೇಟೆ/ಮಡಿಕೇರಿ, ಜ. ೧೮: ಮಾರಕಾಸ್ತçದಿಂದ ಹಲ್ಲೆಗೈದು ಬರ್ಬರವಾಗಿ ಯುವತಿಯನ್ನು ಕೊಲೆಗೈದಿದ್ದ ಪ್ರಕರಣದ ಆರೋಪಿ ಕೆರೆಗೆ ಹಾರಿ ಸಾವನ್ನಪ್ಪಿದ್ದು, ಕೊಲೆಗೆ ಇಬ್ಬರ ನಡುವಿನ ವೈಮನಸ್ಸು ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ ಗ್ರಾಮದ ನಿವಾಸಿ ಸುನಂದ ಮಾದಪ್ಪ ಹಾಗೂ ಸರಸ್ವತಿ ಅವರ ಪುತ್ರಿ ಬುಟ್ಟಿಯಂಡ ಆರತಿ (೨೫) ಎಂಬ ಯುವತಿಯನ್ನು ಕತ್ತಿಯಿಂದ ಕಡಿದು ಕೊಲೆಗೈದಿದ್ದ ಪ್ರಕರಣಕ್ಕೆ ಸಂಬAಧಿಸಿದ ಆರೋಪಿ ಕೊಟ್ಟಂಡ ಟವಿ ತಿಮ್ಮಯ್ಯ ಮೃತದೇಹ ತಾ. ೧೭ ರ ಮಧ್ಯರಾತ್ರಿ ವೇಳೆಯಲ್ಲಿ ರುದ್ರಗುಪ್ಪೆಯ ಆರೋಪಿ ಮನೆಯ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ.

ಆರತಿಯನ್ನು ಆಕೆಯ ಮನೆಯ ಬಳಿಯೇ ಕತ್ತಿಯಿಂದ ಕಡಿದು ತಾ. ೧೪ ರಂದು ಕೊಲೆ ಮಾಡಲಾಗಿತ್ತು. ಈ ಘಟನೆಯ ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಆರೋಪಿಗೆ ಸೇರಿದ ಹೆಲ್ಮೆಟ್ ಘಟನಾ ಸ್ಥಳದಲ್ಲಿ ಪತ್ತೆಯಾಗಿತ್ತು. ಕೊಲೆ ನಡೆದ ಜಾಗದ ಅನತಿ ದೂರದಲ್ಲಿರುವ ಆರೋಪಿಯ ಮನೆ ಬಳಿಯ ಕೆರೆಯ ದಂಡೆಯಲ್ಲಿ ಆತನ ಚಪ್ಪಲಿ, ಮೊಬೈಲ್ ಸೇರಿದಂತೆ ಮದ್ಯ ಹಾಗೂ ವಿಷದ ಬಾಟಲಿ ಕಂಡುಬAದಿತ್ತು. ದುಷ್ಕೃತ್ಯದ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿ ನಾಂಗಾಲ ಸಮೀಪದ ಕೆರೆ ಮತ್ತಿತರ ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.

ಆರೋಪಿಗೆ ಸೇರಿದ ವಸ್ತುಗಳು ಪತ್ತೆಯಾದ ಸ್ಥಳದಲ್ಲಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಸಂಶಯ ವ್ಯಕ್ತಪಡಿಸಿದ ಪೊಲೀಸರ ತಂಡ ನುರಿತ ಈಜುಗಾರರ ಮೂಲಕ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆದರೆ, ಎರಡು ದಿನಗಳ ಕಾರ್ಯಾಚರಣೆಯಲ್ಲಿಯೂ ಆರೋಪಿಯ ಸುಳಿವು ದೊರೆಯದ ಹಿನ್ನೆಲೆ ಕೆರೆಯ ನೀರನ್ನು ಖಾಲಿ ಮಾಡಿ ಶೋಧ ಕಾರ್ಯ ಮುಂದುವರೆಸಲಾಗಿತ್ತು. ಪರಿಣಾಮ ಮಂಗಳವಾರ ಮಧ್ಯರಾತ್ರಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದೆ.

ಕೆರೆಯಲ್ಲಿ ಮೃತದೇಹ ದೊರೆಯಲು ವಿಳಂಬವಾದ ಕಾರಣ ಆರೋಪಿ ಪೊಲೀಸರ ದಿಕ್ಕು ತಪ್ಪಿಸಿ ಪರಾರಿಯಾಗಿರಬಹುದೆನ್ನುವ ಅನುಮಾನವೂ ವ್ಯಕ್ತವಾಗಿತ್ತು. ಈ ಕಾರಣದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಆರೋಪಿಯ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳ ಮೂರು ತಂಡವನ್ನು ರಚಿಸಿದ್ದರು.

ಶ್ವಾನದಳದಿಂದ ಪತ್ತೆ

ಘಟನಾ ಸ್ಥಳಕ್ಕೆ ಜಿಲ್ಲಾ ಅಪರಾಧ ಪತ್ತೆದಳದವರು ತೆರಳಿ ಮಹಜರು ನಡೆಸಿದ ಬಳಿಕ

(ಮೊದಲ ಪುಟದಿಂದ) ಶ್ವಾನದಳವನ್ನು ಕರೆಸಿ ಶೋಧಿಸುವಂತೆ ಸಲಹೆ ನೀಡಿದರು. ಆ ಬಳಿಕ ಶ್ವಾನದಳವನ್ನು ಕರೆಸಲಾಗಿ ಶ್ವಾನವು ಎರಡು ಬಾರಿ ಕೆರೆಯೊಳಗಡೆ ಮೃತದೇಹ ಇದ್ದ ಸ್ಥಳಕ್ಕೆ ಎರಡು ಬಾರಿ ಜಿಗಿದು ಗುರುತು ಪತ್ತೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಕೆರೆಯ ನೀರನ್ನು ಯಂತ್ರದ ಸಹಾಯದಿಂದ ಖಾಲಿ ಮಾಡಲಾಗಿ ಅಂತಿಮವಾಗಿ ಶವ ಪತ್ತೆಯಾಗಿದೆ.

ಬುಧವಾರ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಕೊಲೆಗೆ ಇಬ್ಬರ ನಡುವಿನ ವೈಮನಸ್ಸು ಕಾರಣ ಎನ್ನಲಾಗಿದೆ. ಈರ್ವರ ನಡುವೆ ಇದ್ದ ಪ್ರೀತಿಯನ್ನು ಯುವತಿ ನಿರಾಕರಿಸಿದ ಹಿನ್ನೆಲೆ ಆರೋಪಿ ಆಕೆಯ ಮನೆ ಬಳಿ ತೆರಳಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಪೊಲೀಸರು ಈ ಸಂಬAಧ ತನಿಖೆ ಮುಂದುವರೆಸಿದ್ದಾರೆ.