ಕೂಡಿಗೆ, ಜ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು, ಕಾಳಿದೇವನ ಹೊಸೂರು, ಮದಲಾಪುರ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಬೆಂಡೆಬೆಟ್ಟದ ಕಡೆಯಿಂದ ಬರುವ ಕಾಡಾನೆಗಳ ಹಿಂಡು ಅಡಿಕೆ ತೋಟವನ್ನು ತಿಂದು, ತುಳಿದು ನಷ್ಟಪಡಿಸಿವೆ. ಹುದುಗೂರು ಗ್ರಾಮದ ರಘು, ರವಿ ಮಂಜುನಾಥ, ನಾಗೇಶ್ ಸೇರಿದಂತೆ ಅನೇಕ ರೈತರ ಜಮೀನಿಗೆ ನುಗ್ಗಿ ಬಾಳೆ, ಸಿಹಿ ಗೆಣಸು, ಮರ ಗೆಣಸು, ಸೇರಿದಂತೆ ಅಡಿಕೆ ತೋಟವನ್ನು ನಾಶಪಡಿಸಿವೆ.