ಸುಂಟಿಕೊಪ್ಪ, ಜ.೧೭: ಬೆಲೆ ಏರಿಕೆಯಿಂದ ಶ್ರೀಸಾಮಾನ್ಯನ ಬದುಕು ದುಸ್ತರವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದ್ದು, ಕಾರ್ಯಕರ್ತರು ಸಂಘಟಿತರಾಗಿ ಬಿಜೆಪಿ ವೈಫಲ್ಯವನ್ನು ಮತದಾರರಿಗೆ ತಲುಪಿಸಬೇಕು ಎಂದು ಮಾಜಿ ಸಚಿವ ಬಿ.ಎ.ಜೀವಿಜಯ ಹೇಳಿದರು.
ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಭವನದಲ್ಲಿ ಮಾದಾಪುರ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯಿಂದ ಸೂರ್ಲಬ್ಬಿ, ಗರ್ವಾಲೆ,ಶಾಂತಳ್ಳಿ ಭಾಗದ ಜನರಿಗೆ ತೊಂದರೆಯಾಗಲಿದೆ. ಬೆಳೆಗಾರರ ಸಮಸ್ಯೆ ಬಡವರಿಗೆ ಸೂರು ಒದಗಿಸುವುದು ಸೇರಿದಂತೆ ನಿರುದ್ಯೋಗ ಸಮಸ್ಯೆಗೆ ಬಿಜೆಪಿ ಸರಕಾರ ಏನೇನೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಡಾ.ಮಂಥರ್ಗೌಡ ಮಾತನಾಡಿ ಈ ಬಾರಿ ಬಿಜೆಪಿ ವಿರುದ್ಧ ಅಲೆ ಇದೆ. ಕಾರ್ಯಕರ್ತರು ಬದಲಾವಣೆಗಾಗಿ ಶ್ರಮಿಸಬೇಕು. ಇಲ್ಲಿಂದ ಕಾಂಗ್ರೆಸ್ನ ಎಂಎಲ್ಎ ಆರಿಸಿ ಬಂದರೆ. ಕಾರ್ಯಕರ್ತರಿಗೆ ಬಲ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಹರಪಳ್ಳಿ ರವೀಂದ್ರ ಮಾತನಾಡಿ ಎಲ್ಲಾ ಇಲಾಖೆಗಳಲ್ಲಿ ಲಂಚ ತಾಂಡವವಾಡುತ್ತಿದೆ. ನಮ್ಮದೇ ಜನಪ್ರತಿನಿಧಿ ಇದ್ದರೆ ಕಾರ್ಯಕರ್ತರ ಕೆಲಸ ಆಗುತ್ತಿದೆ. ಕೊಡಗಿನ ಮಲ್ಟಿಸ್ಪೆಷಾಲಿಟಿ ಇಲ್ಲದೆ ತೊಂದರೆಯಾಗಿದೆ. ಪ್ರವಾಸೋದ್ಯಮ ಸದೃಢವಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಜಾತ್ಯತೀತ ಸಾಮಾಜಿಕ ನಿಲುವಿನ ಕಾಂಗ್ರೆಸ್ನಿAದ ದೇಶ ಬಲಿಷ್ಟವಾಗಲಿದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಯಾಕೂಬ್, ೨೫ ವರ್ಷಗಳಿಂದ ಈ ಜಾಗದಲ್ಲಿ ಕಾಂಗ್ರೆಸ್ನ ಎಂಎಲ್ಎ ಇಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಬಡವಾಗಿದ್ದಾರೆÀ ಎಂದು ಹೇಳಿದರು. ಮಾದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ದಾದು ಬೋಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಎಸ್ಟಿ ಮೋರ್ಚಾ ಅಧ್ಯಕ್ಷ ಜಯಂತ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಜಿ. ಸತೀಶ, ಸೋಮವಾರಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಬಿ.ಎಸ್. ಬಸವರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚAಗಪ್ಪ, ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಪಿ. ಮನು ಮೇದಪ್ಪ, ಮಂದೆಯAಡ ಗಣೇಶ, ಚಂದ್ರಶೇಖರ, ಟಿ.ಸಿ. ನೇತ್ರಾಜು ಉಪಸ್ಥಿತರಿದ್ದರು.