ಮಡಿಕೇರಿ, ಜ. ೧೮: ಕೇಂದ್ರ ಸರಕಾರ ನೆಹರೂ ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವಾ ಪ್ರಾಧಿಕಾರ, ಕೊಡಗು ಜಿಲ್ಲಾ ಯುವ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಪದವಿ ಹಾಗೂ ಪದವಿಪೂರ್ವ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಸ್ವಾಮಿ ವಿವೇಕಾನಂದ ಮತ್ತು ಜಾತ್ಯತೀತತೆಯ ಪರಿಕಲ್ಪನೆ’ ಎನ್ನುವ ವಿಷಯದ ಜಿಲ್ಲಾಮಟ್ಟದ ಲೇಖನ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಥಮ ವರ್ಷದ ಬಿ.ಸಿ.ಎ. ವಿದ್ಯಾರ್ಥಿ ನಾಯಮಡ ಮೋಹಿತ್ ಮಾಚಯ್ಯ ಪ್ರಥಮ ಸ್ಥಾನ ಗಳಿಸಿದ್ದಾರೆ.

ಇತ್ತೀಚೆಗೆ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಯುವ ದಿನ ಹಾಗೂ ಯುವ ಸಪ್ತಾಹ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಬಿ. ಪ್ರಸಾದ್ ಅವರು ಮೋಹಿತ್ ಅವರಿಗೆ ಬಹುಮಾನ ವಿತರಿಸಿದರು. ಮೋಹಿತ್ ಮಾಚಯ್ಯ ಅವರು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರ ಅರುವತೋಕ್ಲು ಗ್ರಾಮದ ನಾಯಮಡ ಕಂದಾ ದೇವಯ್ಯ ಹಾಗೂ ಶಾನಿ ದಂಪತಿ ಪುತ್ರ.

ಜಿಲ್ಲಾಮಟ್ಟದ ಲೇಖನ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೋಸೆಫರ ಶಾಲಾ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಕೆ.ಆರ್. ಮಾಳವಿಕ ದ್ವಿತೀಯ ಸ್ಥಾನ, ಮಡಿಕೇರಿ ತಾಳತ್ತಮನೆಯ ಸುಳ್ಯಕೋಡಿ ಜೀವಿತ ಚಿಂತನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.