ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್
ನವದೆಹಲಿ, ಜ. ೧೮: ಶಸ್ತಾçಸ್ತç ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸುವಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಶಸ್ವಿಯಾಗಿದೆ. ಪಂಜಾಬ್ನ ಗುರುದಾಸ್ಪುರ್ನದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿರುವುದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ನಿರ್ಮಿತ ಪಿಸ್ತೂಲ್ಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ತಾ. ೧೭ ಮತ್ತು ೧೮ರ ರಾತ್ರಿ ಗುರುದಾಸ್ಪುರದ ಉಂಚ ತಕ್ಲಾ ಗ್ರಾಮದ ಹೊರವಲಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಪಾಕಿಸ್ತಾನದ ಕಡೆಯಿಂದ ಸದ್ದು ಕೇಳಿಸಿದ್ದು, ಡ್ರೋಣ್ ಸದ್ದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಎಸ್ಎಫ್ ಆ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯ ವೇಳೆ ಏನೋ ಒಂದು ವಸ್ತು ಕೆಳಗೆ ಬಿದ್ದಿತ್ತು. ವಸ್ತು ಬಿದ್ದ ಈ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಉಂಚ ತಕ್ಲಾ ಗ್ರಾಮದಲ್ಲಿ ಕೆಲವು ಮರದ ಬಾಕ್ಸ್ನಲ್ಲಿ ಪ್ಯಾಕೆಟ್ಗಳು ಪತ್ತೆಯಾದವು. ಪ್ಯಾಕೆಟ್ ತೆರೆದಾಗ ಚೀನಾ ನಿರ್ಮಿತವಾದ ೪ ಪಿಸ್ತೂಲ್, ೮ ಮ್ಯಾಗಜೀನ್ ಮತ್ತು ೪೭ ಗುಂಡುಗಳು ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ಚುನಾವಣೆ
ನವದೆಹಲಿ, ಜ. ೧೮: ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಫೆಬ್ರವರಿ ೧೬ ರಂದು ತ್ರಿಪುರಾ, ಫೆಬ್ರವರಿ ೨೭ ರಂದು ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಮಾರ್ಚ್ ೨ ರಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ ೧೨, ಮಾರ್ಚ್ ೧೫ ಮತ್ತು ಮಾರ್ಚ್ ೨೨ ರಂದು ಕೊನೆಗೊಳ್ಳಲಿದೆ. ಪ್ರತಿ ರಾಜ್ಯದಲ್ಲಿ ೬೦ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಿಗದಿಪಡಿಸಲಾಗಿದೆ. ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾದಲ್ಲಿ ಒಟ್ಟು ೬೨.೮ ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.
೮ ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ರಾಜ್ಯಕ್ಕೆ
ಬೆಂಗಳೂರು, ಜ. ೧೮: ಸಾಕಷ್ಟು ವಿಳಂಬದ ನಂತರ ೮ ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ರಾಜ್ಯಕ್ಕೆ ಆಗಮಿಸಿದ್ದು, ಈ ವಾರಾಂತ್ಯದಿAದ ವಿಶೇಷ ಲಸಿಕೆ ಅಭಿಯಾನ ಆರಂಭಿಸಲು ಸರ್ಕಾರ ಸಿದ್ಧತೆಗಳ ನಡೆಸುತ್ತಿದೆ. ಜನವರಿಯೊಳಗಾಗಿ ಬೂಸ್ಟರ್ ಡೋಸ್ ಲಸಿಕೆಯಲ್ಲಿ ಶೇ. ೫೦ ರಷ್ಟು ಗುರಿ ತಲುಪಬೇಕೆಂದು ಡಾ.ಸುಧಾಕರ್ ಅವರು ಸೂಚಿಸಿದ್ದರು. ಆದರೆ, ಲಸಿಕೆಗಳ ಕೊರತೆಯಿಂದಾಗಿ ಈ ಗುರಿ ಮುಟ್ಟಲು ಸಾಧ್ಯವಾಗಿಲಿಲ್ಲ. ಸಾಕಷ್ಟು ಕಡೆ ಕೋವ್ಯಾಕ್ಸಿನ್ ಲಸಿಕೆಗಳಿದ್ದು, ಕೋವಿಶೀಲ್ಡ್ ಹಾಗೂ ಹೆಟೆರೊ ಲಾಜಸ್ ಕಾರ್ಬೆವಾಕ್ಸ್ ಲಸಿಕೆಗಳ ಕೊರತೆ ಎದುರಾಗಿತ್ತು. ಈ ಹಿನ್ನೆಲೆ ಬೂಸ್ಟರ್ ಡೋಸ್ ವಿಶೇಷ ಲಸಿಕೆ ಅಭಿಯಾನ ಸ್ಥಗಿತಗೊಳ್ಳುವಂತಾಗಿತ್ತು. ಬೇಡಿಕೆಗಳು ಇಲ್ಲದಿದ್ದ ಕಾರಣ ಕೇಂದ್ರ ಸರ್ಕಾರದ ಬಳಿ ರಾಜ್ಯ ಸರ್ಕಾರ ಮನವಿ ಇಟ್ಟಿರಲಿಲ್ಲ. ಇದೀಗ ಚೀನಾ, ಅಮೆರಿಕಾ ಹಾಗೂ ಇತರೆ ದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ, ಕೋವಿಶೀಲ್ಡ್ ಲಸಿಕೆ ಲಭ್ಯವಿರದ ಕುರಿತಂತೆಯೂ ದೂರುಗಳು ದಾಖಲಾಗಿವೆ. ಈ ಹಿನ್ನೆಲೆ ರಾಜ್ಯಕ್ಕೆ ೩೦ ಲಕ್ಷ ಡೋಸ್ ಲಸಿಕೆಗಳ ರವಾನಿಸುವಂತೆ ಕೇಂದ್ರ ಬಳಿ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು.
ಹಸುಗೂಸುಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಬೀದರ್, ಜ. ೧೮: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ನಿಲಮನಹಳ್ಳಿ ತಾಂಡಾದಲ್ಲಿ ನಡೆದಿದೆ. ೨೫ ವರ್ಷದ ಮೀರಾಬಾಯಿ ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಅವೆರಡೂ ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾ ಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿಬರುತ್ತಿದೆ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆ
ಜಗ್ದಲ್ಪುರ, ಜ. ೧೮: ಚತ್ತೀಸ್ಗಢದ ಕಾಂಗರ್ ವ್ಯಾಲಿ ರಾಷ್ಟಿçÃಯ ಉದ್ಯಾನವನದಲ್ಲಿ ಅಪರೂಪದ ಕಿತ್ತಳೆ ಬಣ್ಣದ ಬಾವಲಿ ಪತ್ತೆಯಾಗಿದೆ. ಪೇಂಟೆಡ್ ಬ್ಯಾಟ್ ಎಂದೇ ಕರೆಸಿಕೊಳ್ಳುವ ಈ ಅಪರೂಪದ ಪ್ರಾಣಿ, ಕಿತ್ತಳೆ ಬಣ್ಣದಲ್ಲಿರುತ್ತದೆ ಹಾಗೂ ಕಪ್ಪು ಬಣ್ಣದ ರೆಕ್ಕೆಗಳನ್ನು ಹೊಂದಿರುತ್ತದೆ. ಕಾಂಗರ್ ವ್ಯಾಲಿ ರಾಷ್ಟಿçÃಯ ಉದ್ಯಾನವನದ ಬಳಿ ಇರುವ ಪರಲಿ ಬೋಡಾಲ್ ಗ್ರಾಮದಲ್ಲಿ ಬಾವಲಿ ಪತ್ತೆಯಾಗಿದೆ ಎಂದು ರಾಷ್ಟಿçÃಯ ಉದ್ಯಾನವನದ ನಿರ್ದೇಶಕ ಧಮ್ಶಿಲ್ ಗನ್ವೀರ್ ಹೇಳಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿನ ಕಾಂಗರ್ ವ್ಯಾಲಿ ರಾಷ್ಟಿçÃಯ ಉದ್ಯಾನವನದಲ್ಲಿ ಮೂರನೇ ಬಾರಿಗೆ ಪತ್ತೆಯಾಗಿದೆ. ಈ ಅಪರೂಪದ ಬಾವಲಿಗೆ ಕೆರಿವೌಲಾ ಪಿಕ್ಟಾ ಎಂಬ ವೈಜ್ಞಾನಿಕ ಹೆಸರೂ ಇದ್ದು, ಅತ್ಯಂತ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿವೆ. ಈ ಬಾವಲಿಗಳು ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಚೀನಾ, ಭಾರತ, ಇಂಡೋನೇಷ್ಯಾ, ಮಲೇಷ್ಯಾ, ನೇಪಾಳ, ಶ್ರೀಲಂಕಾ, ಥಾಯ್ಲ್ಯಾಂಡ್, ವಿಯೆಟ್ನಾಮ್ ಸಾಮಾನ್ಯವಾಗಿ ಕಂಡುಬರಲಿವೆ ಎಂದು ಧಮ್ಶಿಲ್ ಗನ್ವೀರ್ ಮಾಹಿತಿ ನೀಡಿದ್ದಾರೆ.
ನಟಿಗೆ ದೇವಾಲಯ ಪ್ರವೇಶ ನಿರಾಕರಣೆ ಆರೋಪ
ಕೊಚ್ಚಿ, ಜ. ೧೮: ದಕ್ಷಿಣ ಭಾರತದ ಜನಪ್ರಿಯ ನಟಿ ಅಮಲಾ ಪೌಲ್ ಅವರಿಗೆ ಇಲ್ಲಿಗೆ ಸಮೀಪದ ತಿರುವೈರಾಣಿಕುಲಂ ಮಹಾದೇವ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆವರಣದೊಳಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡುವ ಸಂಪ್ರದಾಯಗಳನ್ನು ಉಲ್ಲೇಖಿಸಿ ದೇವಾಲಯದ ಅಧಿಕಾರಿಗಳು ತನಗೆ ದರ್ಶನ ನಿರಾಕರಿಸಿದ್ದಾರೆ ಎಂದು ನಟಿ ಹೇಳಿದ್ದಾರೆ. ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದ ಬಳಿಕ ದೃಢನಿಶ್ಚಯದ ಅಮಲಾ ಅವರು ದೇವಸ್ಥಾನದ ಮುಂಭಾಗದ ರಸ್ತೆಯಿಂದಲೇ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಸಂದರ್ಶಕರ ನೋಂದಣಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊAಡ ಅವರು, ‘ದೇವರನ್ನು ನೋಡದಿದ್ದರೂ ಚೈತನ್ಯವನ್ನು ಅನುಭವಿಸಿದೆ' ಎಂದು ಬರೆದಿದ್ದಾರೆ. ೨೦೨೩ನೇ ವರ್ಷವಾದರೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ದುಃಖ ಮತ್ತು ನಿರಾಶಾದಾಯಕವಾಗಿದೆ. ನಾವೆಲ್ಲರೂ ಸಮಾನವಾಗಿ ಪರಿಗಣಿಸಲ್ಪಡುತ್ತೇವೆಯೇ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ಅಮಲಾ ತಿಳಿಸಿದ್ದಾರೆ. ಆದರೆ, ತಿರುವೈರಾಣಿಕುಲಂ ಮಹಾದೇವ ದೇವಸ್ಥಾನ ಟ್ರಸ್ಟ್ನ ದೇವಾಲಯದ ಅಧಿಕಾರಿಗಳು ಕೇವಲ ದೇವಾಲಯದ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿ ಹೆಲಿಕಾಪ್ಟರ್ ಪತನ-೧೬ ಮಂದಿ ಸಾವು
ಕೀವ್, ಜ. ೧೮: ಉಕ್ರೇನ್ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಆಂತರಿಕ ಸಚಿವ ಸೇರಿ ೧೬ ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಹೊರವಲಯದ ಬ್ರೋವರಿಯಲ್ಲಿ ಶಿಶು ವಿಹಾರದ ಬಳಿ ಹೆಲಿಕಾಪ್ಟರ್ ಪತನಗೊಂಡು ಎರಡು ಮಕ್ಕಳು, ಉಕ್ರೇನ್ನ ಆಂತರಿಕ ಸಚಿವ ಸೇರಿದಂತೆ ೧೬ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ೧೬ ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ರಾಷ್ಟಿçÃಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ತಿಳಿಸಿದ್ದಾರೆ. ಮೃತರಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ, ಆಂತರಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.