ಗೋಣಿಕೊಪ್ಪಲು, ಜ. ೧೭: ಮಧ್ಯರಾತ್ರಿ ಲಾರಿಯೊಂದು ರಸ್ತೆಯ ತಿರುವಿನಲ್ಲಿ ಮಗುಚಿಕೊಂಡ ಘಟನೆ ನಡೆದಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ತೆರಳಿ ಲಾರಿಯಲ್ಲಿ ಸಿಲುಕಿದ್ದ ಚಾಲಕ ಹಾಗೂ ಕ್ಲೀನರ್ ಅನ್ನು ಹೊರ ಎಳೆದು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾ. ೧೬ರ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು ಬಳಿಯ ರಸ್ತೆ ತಿರುವಿನಲ್ಲಿ ಸಿಮೆಂಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮಗುಚಿಕೊಂಡಿದೆ. ಈ ವೇಳೆ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಲಾರಿಯಲ್ಲಿ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ಸಮೀಪದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಕ್ಕಂಡ ರೂಪ ಭೀಮಯ್ಯ ತಮ್ಮ ಮಗನಾದ ಬಿದ್ದು ಅವರ ಸಹಾಯ ಪಡೆದು ಲಾರಿಯಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಕೂಡಲೇ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಿದ್ದಾರೆ. ಗೋಣಿಕೊಪ್ಪ ಗೋಣಿಕೊಪ್ಪಲು, ಜ. ೧೭: ಮಧ್ಯರಾತ್ರಿ ಲಾರಿಯೊಂದು ರಸ್ತೆಯ ತಿರುವಿನಲ್ಲಿ ಮಗುಚಿಕೊಂಡ ಘಟನೆ ನಡೆದಿದೆ. ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ತೆರಳಿ ಲಾರಿಯಲ್ಲಿ ಸಿಲುಕಿದ್ದ ಚಾಲಕ ಹಾಗೂ ಕ್ಲೀನರ್ ಅನ್ನು ಹೊರ ಎಳೆದು ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾ. ೧೬ರ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಗೋಣಿಕೊಪ್ಪ - ವೀರಾಜಪೇಟೆ ಮುಖ್ಯ ರಸ್ತೆಯ ಹಾತೂರು ಬಳಿಯ ರಸ್ತೆ ತಿರುವಿನಲ್ಲಿ ಸಿಮೆಂಟ್ ತುಂಬಿದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮಗುಚಿಕೊಂಡಿದೆ. ಈ ವೇಳೆ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಲಾರಿಯಲ್ಲಿ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ಸಮೀಪದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಕ್ಕಂಡ ರೂಪ ಭೀಮಯ್ಯ ತಮ್ಮ ಮಗನಾದ ಬಿದ್ದು ಅವರ ಸಹಾಯ ಪಡೆದು ಲಾರಿಯಡಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿ ಕೂಡಲೇ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ಒದಗಿಸಿದ್ದಾರೆ. ಗೋಣಿಕೊಪ್ಪ