ಗೋಣಿಕೊಪ್ಪ ವರದಿ, ಜ. ೧೮: ದೇವಣಗೇರಿ - ತಲಕಟಕೇರಿ ಗ್ರಾಮದಲ್ಲಿ ರೂ. ೭ ಲಕ್ಷ ಅನುದಾನದಲ್ಲಿ ಪುಗ್ಗೇರ ಕುಟುಂಬದ ಚಾಮುಂಡಿ ದೇವರ ಪುನರ್ ಪ್ರತಿಷ್ಠಾಪನೆ ನಡೆಯಿತು. ಕುಟುಂಬದ ಸದಸ್ಯರು, ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.

ಕುಟುಂಬದ ಹಿರಿಯರಾದ ಪುಗ್ಗೇರ ಪಿ. ಪೊನ್ನಪ್ಪ ಈ ಸಂದರ್ಭ ಮಾಹಿತಿ ನೀಡಿ, ಹಿಂದೆ ಪುಗ್ಗೇರ ಕುಟುಂಬದ ಹಿರಿಯರ ಮೇಲೆ ಪಾಳೇಗಾರರು ಆಕ್ರಮಣಕ್ಕೆ ಮುಂದಾಗಿದ್ದರು. ಕುಟುಂಬಕ್ಕೆ ಸೇರಿದ ಆಸ್ತಿ, ಸಂಪನ್ಮೂಲ ನೀಡುವಂತೆಯೂ, ಹೋರಾಟಕ್ಕೆ ಬರುವಂತೆ ತಾಕೀತು ಸಂದರ್ಭ ನಮ್ಮ ಹಿರಿಯ ವ್ಯಕ್ತಿ ಬೈತೂರು ದೇವರ ಮೊರೆ ಹೋಗಿ, ರಕ್ಷಣೆಗೆ ಬೇಡಿಕೊಂಡಿದ್ದರು. ಆಗ ಬೈತೂರು ದೇವರು ರಕ್ಷಣೆಗೆ ಚಾಮುಂಡಿ ದೇವರನ್ನು ಕಳುಹಿಸಿದ್ದರು. ಇದರಂತೆ ನಾವು ಚಾಮುಂಡಿಯನ್ನು ಇಂದಿಗೂ ಪೂಜಿಸುತ್ತಿದ್ದೇವೆ. ಪುನರ್ ಪ್ರತಿಷ್ಠಾಪನೆ ಮೂಲಕ ಅಭಿವೃದ್ಧಿಪಡಿಸಲಾಗಿದೆ ಎಂದರು.

ಕುಟುAಬ ಅಧ್ಯಕ್ಷ ನಂದಾ ಸುಬ್ಬಯ್ಯ, ಹಿರಿಯರಾದ ಅಕ್ಕವ್ವ ಅಪ್ಪಚ್ಚು, ಗಂಗವ್ವ ಉತ್ತಪ್ಪ, ಪುಗ್ಗೇರ ಮಣಿ, ರಂಜಿ ದೇವಯ್ಯ, ರಾಣಾ ಕಾರ್ಯಪ್ಪ, ಶುಭ ದೇವಯ್ಯ, ಕಿಟ್ಟು ವಿಜು ನಂಜುAಡ, ಪ್ರಕಾಶ್ ಇತರರಿದ್ದರು.