ಸೋಮವಾರಪೇಟೆ, ಜ. ೧೭: ಆಹಾರ ಇಲಾಖೆಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪ್ರತಿದಿನ ನೂರಾರು ಮಂದಿ ಸಾರ್ವಜನಿಕರು ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ದಿನ ಕಳೆಯುವಂತಾಗಿದೆ.

ಅಧಿಕಾರಿಗಳು ಕಚೇರಿಗೆ ಆಗಮಿಸುವ ಮೊದಲೇ ಬಾಗಿಲ ಬಳಿ ನಿಂತು ಸರತಿ ಸಾಲು ಕಾಪಾಡಿಕೊಳ್ಳುವ ಮಂದಿ, ಸಂಜೆಯವರೆಗೂ ನಿಂತಲ್ಲಿಯೇ ನಿಂತು ಬಸವಳಿದು ಬೀಳುವ ದೃಶ್ಯ ಸಾಮಾನ್ಯವಾಗಿದೆ.

ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು, ವಿಳಾಸ ಬದಲಾವಣೆ, ಪಡಿತರ ಚೀಟಿಯಲ್ಲಿ ಇಕೆವೈಸಿ ಮಾಡಿಸಿಕೊಳ್ಳುವವರು, ತಿದ್ದುಪಡಿ, ಸೇರ್ಪಡೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಆಗಮಿಸುವ ಮಂದಿ ಸರ್ವರ್ ಸಮಸ್ಯೆಯಿಂದಾಗಿ ಇನ್ನಿಲ್ಲದ ಪರದಾಟ ಅನುಭವಿಸುತ್ತಿದ್ದಾರೆ.

ಹೊಸದಾಗಿ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ತಾ. ೧೩ ರವರೆಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಇರುವುದರಿಂದ ಸಾರ್ವಜನಿಕರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಕಚೇರಿಗೆ ಮುಗಿ ಬೀಳುತ್ತಿದ್ದಾರೆ. ಇರುವ ಸಿಬ್ಬಂದಿಗಳು ಸಾವಧಾನದಿಂದಲೇ ಅರ್ಜಿ ತಿದ್ದುಪಡಿ ಮಾಡುತ್ತಿದ್ದು, ಕೆಲವೊಮ್ಮೆ ಅಂತಿಮ ಹಂತದಲ್ಲಿ ಸರ್ವರ್ ಅಲಭ್ಯವಾಗುತ್ತಿರುವುದರಿಂದ ಅರ್ಜಿ ಅಪೂರ್ಣವಾಗುತ್ತಿವೆ.