ಕುಶಾಲನಗರ, ಜ. ೧೬: ಪತ್ನಿಯನ್ನು ಪೀಡಿಸುತ್ತಿದ್ದ ಸರ್ಕಾರಿ ಶಿಕ್ಷಕ ಮತ್ತೆ ಜೈಲು ಪಾಲಾದ ಘಟನೆ ನಡೆದಿದೆ.

ಕುಶಾಲನಗರ ಸಮೀಪದ ಕೂಡಿಗೆ ನಿವಾಸಿ ನಾಗೇಂದ್ರ ಅಲಿಯಾಸ್ ನಂದ ಜೈಲು ಸೇರಿದ ಶಿಕ್ಷಕ. ಈ ಹಿಂದೆ ನಾಗೇಂದ್ರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬAಧಿಸಿದAತೆ ಕೆಲವು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದು, ಇದೀಗ ಹೊರ ಬಂದು ತನ್ನ ಪತ್ನಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಪಟ್ಟಣ ಪೊಲೀಸರು ಬಂಧಿಸಿ ಕ್ರಮಕೈಗೊಂಡಿದ್ದಾರೆ.

ವಿಶೇಷ ಎಂದರೆ ಶಿಕ್ಷಕ ನಾಗೇಂದ್ರ ಕೆಲವು ಸಮಯಗಳ ಹಿಂದೆ ಮಡಿಕೇರಿ ಜೈಲಿನ ಕೈದಿಗಳಿಗೆ ಶಿಕ್ಷಕನಾಗಿ ನಿಯೋಜನೆಗೊಂಡಿದ್ದು, ಅಪರಾಧಿಗಳ ಮನಪರಿವರ್ತನೆ ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.