ಚೆಟ್ಟಳ್ಳಿ, ಜ. ೧೬: ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲೆಯ ಅಧ್ಯಕ್ಷ ಕೃಷ್ಣಮೂರ್ತಿ, ಚೆಟ್ಟಳ್ಳಿ ಕೃ.ಪ.ಸ. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಸಮ್ಮುಖದಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ಈರಳೆವಳಮುಡಿ ಶಾಖಾ ಕಟ್ಟಡದ ಆವರಣದಲ್ಲಿ ಶ್ರೀ ಪಂಚಮುಖಿ ವಾಯುಪುತ್ರ ಮೂರ್ತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು.
ಸಂಘದ ಈರಳೆ ಶಾಖೆಯನ್ನು ನೂತನವಾಗಿ ನವೀಕರಣಗೊಳಿಸಲಾಗಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಶಾಖಾ ಕಟ್ಟಡದ ಆವರಣದಲ್ಲಿ ಕಾರ್ಕಳದ ನುರಿತ ಶಿಲ್ಪಿ ಗುಣವಂತೇಶ್ವಭಟ್ ಅವರÀ ಪರಿಶ್ರಮದಿಂದ ಸುಮಾರು ೯ ಅಡಿ ಎತ್ತರದ ಐದು ಮುಖದ ಅಪರೂಪದ ಕಲ್ಲಿನ ಕೆತ್ತನೆಯ ಶ್ರೀ ಪಂಚಮುಖಿ ವಾಯುಪುತ್ರನ ಮೂರ್ತಿ ಪ್ರತಿಷ್ಠಾಪನೆಗೊಂಡಿತು.
ಬೆಳಿಗ್ಗೆ ೩ ವರ್ಷದಿಂದ ೯ ವರ್ಷದೊಳಗಿನ ಸಂಘದ ರೈತರ ೩೭ ಪುಟ್ಟ ಮಕ್ಕಳಿಂದ ಶ್ರೀ ಪಂಚಮುಖಿ ವಾಯುಪುತ್ರ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿತು. ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚು ರಂಜನ್‌ರವರು ಪಂಚಮುಖಿ ವಾಯುಪುತ್ರನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಊರಿನಲ್ಲಿ ಶಾಲೆಯೊಂದಿದ್ದರೆ ಜ್ಞಾನದ ದೇಗುಲಗಳಾಗಿ ಹಲವು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗುತ್ತದೆ. ಅದೇ ರೀತಿ ದೇವಾಲಯವೊಂದು ಸ್ಥಾಪನೆಯಾದರೆ ಆ ಊರಿಗೆ ಸುಭಿಕ್ಷೆಯಾಗಲಿದೆ. ಎಲ್ಲರೂ ಒಗ್ಗಟಿನಿಂದ ಕಾರ್ಯವನ್ನು ಮಾಡಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯವೆಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕಾರ್ಕಳದ ಶ್ರೀ ಗುಣವಂತೇಶ್ವರ ಭಟ್ ಮಾತನಾಡಿ ಚೆಟ್ಟಳ್ಳಿಯಲ್ಲಿ ಇಷ್ಟೊಂದು ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರಣಕರ್ತರಾದ ಬಲ್ಲಾರಂಡ ಮಣಿ ಉತ್ತಪ್ಪ ಅವರ ದೇವತಾ ಕಾರ್ಯವನ್ನು ಶ್ಲಾಘಿಸಿದರು. ಮಕರ ಸಂಕ್ರಾAತಿಯ ವಿಶೇಷ ದಿನದಂದು ಪಂಚಮುಖಿ ವಾಯುಪುತ್ರನ ಪ್ರತಿಷ್ಠಾಪನೆ ಮಾಡಿರುವುದೇ ವಿಶೇಷವೆಂದರು.
ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಪಿ. ಕೃಷ್ಣಮೂರ್ತಿ ಮಾತನಾಡಿ, ಅದೆಷ್ಟೋ ಪುಣ್ಯಗಳ ಫಲದಿಂದ ತಪೋಭೂಮಿಯಲ್ಲಿ ಪರಮಮುಕ್ತಿ ಮಾರ್ಗಕ್ಕಾಗಿಯೇ ಭಗವಂತ ಈ ಮಾನವನ ಜನ್ಮ ಸೃಷ್ಟಿ ಮಾಡಿದ್ದಾನೆ. ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಮುಕ್ತಿ ಪಡೆದು ಬದುಕು ಸಾರ್ಥಕ ಮಾಡಿಕೊಳ್ಳಬೇಕೆಂದರು. ಹಿರಿಯರಾದ ಚೇರಳದ ತಮ್ಮಂಡ ಮುದ್ದಮಯ್ಯ ಮಾತನಾಡಿ, ಚೆಟ್ಟಳ್ಳಿಯಲ್ಲಿನ ಸಹಕಾರ ಸಂಘ ಉತ್ತಮ ಕಾರ್ಯವನ್ನು ನಡೆಸುತ್ತಿದ್ದು ಎಲ್ಲರು ಸಹಕರಿಸಬೇಕೆಂದರು.
ಸAಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಚೆಟ್ಟಳ್ಳಿ ಸಹಕಾರ ಸಂಘದ ಅಭಿವ್ರದ್ದಿ ಕಾರ್ಯದಲ್ಲಿ ಹಲವು ತೊಂದರೆಗಳನ್ನು ಅನುಭವಿಸಿದ್ದು, ಕಾನೂನು ಹೋರಾಟದ ಪರಿಸ್ಥಿತಿಯೂ ಎದುರಾಗಿದೆ. ಆದರೂ ಚೆಟ್ಟಳ್ಳಿ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಾ ರಾಜ್ಯದಲ್ಲೇ ಮಾದರಿಯಾಗಿದೆ. ಇಂದು ಶ್ರೀ ಪಂಚಮುಖಿ ವಾಯುಪುತ್ರ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರಣಕರ್ತರಾದ ದಾನಿಗಳಿಗೂ ಎಲ್ಲಾ ಸಹಕಾರಿಗಳಿಗೂ ವಂದಿಸುತ್ತೇನೆAದರು. ಮುಂದಿನ ದಿನಗಳಲ್ಲಿ ಚೆಟ್ಟಳ್ಳಿಯಲ್ಲಿ ಚಾಮುಂಡಿ ದೇವಿಯ ಮೂರ್ತಿಯನ್ನು ಪ್ರತಿ ಷ್ಠಾಪಿಸಲು ಪಣತೊಟ್ಟಿದ್ದೇನೆಂದರು.
ಈ ಸಂದರ್ಭ ಶಿಲ್ಪಿ ಕಾರ್ಕಳದ ಶ್ರೀ ಗುಣವಂತೇಶ್ವರ ಭಟ್, ದಾನಿಗಳಾದ ಚೇರಳ ತಮ್ಮಂಡ ಮುದ್ದಮಯ್ಯ, ಉದ್ಯಮಿ ಶ್ರೀನಿವಾಸ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬಲ್ಲಾರಂಡ ಮಣಿ ಉತ್ತಪ್ಪ ಸ್ವಾಗತಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್. ವಂದಿಸಿದರು. ಈ ಸಂದರ್ಭ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಸದಸ್ಯರುಗಳು ಭಾಗÀವಹಿಸಿದ್ದರು. ಶ್ರೀ ಪಂಚಮುಖಿ ವಾಯುಪುತ್ರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿ ಅನ್ನಸಂತರ್ಪಣೆ ನೆರವೇರಿತು. -ಕರುಣ್ ಕಾಳಯ್ಯ