ಪೊನ್ನಂಪೇಟೆ, ಜ. ೧೬: ಕೊಡಗು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲಾಗುವ ರಾಷ್ಟಿçÃಯ ಯುವ ಸಪ್ತಾಹ ಅಂಗವಾಗಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಯೋಗಾಥಾನ್ ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲೂಕು ಉಪತಹಶೀಲ್ದಾರ್ ಸ್ವಾತಿ, ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಚುಮ ಚುಮು ಚಳಿಯಲ್ಲಿ ಮಂಜು ಮುಸುಕಿದ ವಾತಾವರಣದ ನಡುವೆ ಒಂದೂವರೆ ಗಂಟೆ ಕಾಲ ಅಂತರರಾಷ್ಟಿçÃಯ ಯೋಗಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಮಾರ್ಗದರ್ಶನದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ೫೦೦ ಕ್ಕೂ ಹೆಚ್ಚು ಜನರು ಯೋಗಾಭ್ಯಾಸ ಮಾಡಿದರು.

ಈ ಸಂದರ್ಭ ಅಂತರ ರಾಷ್ಟಿçÃಯ ಯೋಗ ಪಟು ಅಮೃತ್ ರಾಕೇಶ್ ಮಾತನಾಡಿ ಪ್ರತಿ ದಿನ ಯೋಗ ಅಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ಅಭ್ಯಾಸ ಮಾಡಿದ ಯೋಗ ಪ್ರಕಾರಗಳನ್ನು ಮನೆಯಲ್ಲಿ ಪ್ರತಿ ದಿನ ಮಾಡುವುದ ರಿಂದ ಸದಾ ಲವ ಲವಿಕೆಯಿಂದ ಆರೋಗ್ಯವಂತರಾಗಿ ಇರಬಹುದು ಎಂದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ, ಕರ್ನಾಟಕ ಪಬ್ಲಿಕ್ ಶಾಲೆ, ಸಾಯಿಶಂಕರ ಶಾಲೆ, ಸಂತ ಅಂತೋಣಿ ಶಾಲೆ, ಅಪ್ಪಚ್ಚ ಕವಿ ಶಾಲೆ, ವಿದ್ಯಾನಿಕೇತನ ಕಾಲೇಜು, ಸರ್ವ ದೈವತಾ ಶಾಲೆ, ಶ್ರೀಮಂಗಲ ಜೆ.ಸಿ. ಶಾಲೆ, ಕೂರ್ಗ್ ಸಿಗ್ನೇಚರ್ ಶಾಲೆ, ಹಳ್ಳಿಗಟ್ಟು ಸಿ ಐ ಟಿ ಕಾಲೇಜು, ಗೋಣಿಕೊಪ್ಪ ಲಯನ್ಸ್ ಮತ್ತು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭ ಶ್ರೀ ಮಂಗಲ ಆಯುಷ್ ಯೋಗ ತರಬೇತಿ ಶಿಕ್ಷಕಿ ಚಂಗುಲAಡ ಅಶ್ವಿನಿ ಅಕ್ಕಮ್ಮ, ಗೋಣಿಕೊಪ್ಪ ಸಂಪೂರ್ಣ ಸ್ವಾಸ್ಥö್ಯ ಯೋಗ ಕೇಂದ್ರದ ಮುಖ್ಯಸ್ಥ.ಕೆ.ಕೆ. ಸೋಮಯ್ಯ, ಕೈಕೇರಿ ಪತಂಜಲಿ ಯೋಗ ಪೀಠ ಮುಖ್ಯಸ್ಥ ಶ್ರೀರಂಗ ಬಲ್ಲಾಳ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ತರಬೇತುದಾರ ಕುಪ್ಪಂಡ ಸುಬ್ಬಯ್ಯ, ದೈಹಿಕ ಶಿಕ್ಷಕರಾದ ಡ್ಯಾನಿ, ಮಹೇಶ್, ಚೌಹಾಣ್ ಇನ್ನಿತರರು ಇದ್ದರು.