ಕುಶಾಲನಗರ, ಜ. ೧೬: ಕುಶಾಲನಗರ ಕಾವೇರಿ ನದಿಯಲ್ಲಿ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸೋಮವಾರಪೇಟೆ ಶಾಂತಳ್ಳಿ ಗ್ರಾಮದ ಧರಣ (೨೬) ಎಂಬ ಯುವಕ ಕುಶಾಲನಗರ ತಾವರೆಕೆರೆ ಕೆಳಭಾಗದ ನದಿಗೆ ಹಾರಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸಮೀಪದ ಆಲೂರು ಸಿದ್ದಾಪುರ ಬಳಿ ಬಾರ್‌ವೊಂದರಲ್ಲಿ ಕೆಲವು ಸಮಯದಿಂದ ಕೆಲಸ ಮಾಡುತ್ತಿದ್ದು, ಸೋಮವಾರ ಮಧ್ಯಾಹ್ನ ಪಾನಮತ್ತನಾದ ಧರಣ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮಾಹಿತಿ ನೀಡಿರುವುದಾಗಿ ಸ್ನೇಹಿತರು ತಿಳಿಸಿದ್ದಾರೆ. ಕುಶಾಲನಗರ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರ‍್ಯಾಫ್ರ‍್ಸ್ಗಳ ಸಹಾಯದಿಂದ ಯುವಕನ ಮೃತದೇಹವನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಜರು ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.