ಸೋಮವಾರಪೇಟೆ, ಜ. ೧೪: ಇಲ್ಲಿನ ಕೆವಿಬಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಫೆ. ೪ ಮತ್ತು ೫ ರಂದು ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳ್ಳಿ ಬಟ್ಟಲಿನ ಕೆವಿಬಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಎಸ್.ಆರ್. ಸುಮಂತ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. ೪ ಮತ್ತು ೫ ರಂದು ಪಂದ್ಯಾಟ ನಡೆಯಲಿದ್ದು, ಸ್ಥಳೀಯ ಆಟಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಸೋಮವಾರಪೇಟೆ ಪಟ್ಟಣ ಸುತ್ತಮುತ್ತಲಿನ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದರು.
ಪAದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ. ೫೦ ಸಾವಿರ ನಗದು ಹಾಗೂ ಬೆಳ್ಳಿ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೨೫ ಸಾವಿರ ನಗದು ಹಾಗೂ ಬೆಳ್ಳಿ ಟ್ರೋಫಿ ನೀಡಲಾಗುವುದು. ಈಗಾಗಲೇ ೧೦ ಫ್ರಾಂಚೈಸಿಗಳನ್ನು ರಚಿಸಿದ್ದು, ತಾ. ೧೫ರಂದು (ಇಂದು) ಕರ್ಕಳ್ಳಿ ಅಂಗನವಾಡಿ ಆವರಣದಲ್ಲಿ ಬಿಡ್ಡಿಂಗ್ ನಡೆಯಲಿದೆ ಎಂದು ಮಾಹಿತಿಯಿತ್ತರು.
ಐಪಿಎಲ್ ಮಾದರಿಯಲ್ಲಿ ನಡೆಯುವ ಪಂದ್ಯಾಟಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಕಾಂಗ್ರೆಸ್ ಮುಖಂಡ ಡಾ. ಮಂಥರ್‌ಗೌಡ ಸೇರಿದಂತೆ ಇತರರು ಚಾಲನೆ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕೆವಿಬಿ ಫ್ರೆಂಡ್ಸ್ ಕ್ಲಬ್‌ನ ಕಾರ್ಯದರ್ಶಿ ಎಸ್. ಪವನ್, ಖಜಾಂಚಿ ಹೆಚ್.ಪಿ. ವಿನೋದ್, ಕೆ.ಆರ್. ವಿನಯ್ ಅವರುಗಳು ಉಪಸ್ಥಿತರಿದ್ದರು.