ಕುಶಾಲನಗರ, ಜ. ೧೪ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದ ಅಂಗವಾಗಿ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಸಾಂಸ್ಕೃತಿಕ ಉಪ ಸಮಿತಿಯ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಕಲೆ- ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರಕಾರಗಳ ಕಾರ್ಯಕ್ರಮಗಳ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾ ಪ್ರತಿಭೆಗಳು ಹಾಗೂ ಕಲಾತಂಡಗಳಿಗೆ ಆದ್ಯತೆ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕಲಾವಿದರು ತಮ್ಮ ವೈಯಕ್ತಿಕ ವಿವರ ಹಾಗೂ ತಮ್ಮ ಕಲಾತಂಡದ ವಿವರಗಳನ್ನು ನೀಡಬೇಕಾಗಿರುತ್ತದೆ. ಕಾರ್ಯಕ್ರಮದಲ್ಲಿ ಪ್ರದರ್ಶಿಸುವ ಕಲೆಯ ವಿವರಗಳನ್ನು (ಏಕವ್ಯಕ್ತಿ ಗಾಯನ, ಸಮೂಹ ಗಾಯನ, ಜನಪದ ನೃತ್ಯ, ಭರತನಾಟ್ಯ ಸಾಮೂಹಿಕ ನೃತ್ಯ ಮತ್ತಿತರ ಕಲಾ ಪ್ರಕಾರಗಳು) ಅರ್ಜಿ ಮೂಲಕ ಸಲ್ಲಿಸಬೇಕು.
ಕಲಾ ಪ್ರದರ್ಶನದಲ್ಲಿ ವೈಯಕ್ತಿಕ ವಿಭಾಗಕ್ಕೆ ೪-೫ ನಿಮಿಷಗಳು ಹಾಗೂ ಸಮೂಹ ಗುಂಪು ವಿಭಾಗದ ಪ್ರದರ್ಶನಕ್ಕೆ ೧೦-೧೨ ನಿಮಿಷಗಳ ಕಾಲಾವಕಾಶ ಒದಗಿಸಲಾಗುವುದು ಎಂದು ಸಾಂಸ್ಕೃತಿಕ ಸಮಿತಿಯ ಸಂಚಾಲಕ ಉ.ರಾ. ನಾಗೇಶ್ ತಿಳಿಸಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬಹುದಾಗಿದೆ.
ಸಮ್ಮೇಳನದಲ್ಲಿ ಮಧ್ಯಾಹ್ನ ೧ ರಿಂದ ೨ ಗಂಟೆಯವರೆಗೆ ಗಾಯನ ಕಾರ್ಯಕ್ರಮ ಹಾಗೂ ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕುಶಾಲನಗರ ತಾಲೂಕು ವ್ಯಾಪ್ತಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ತಾ. ೨೦ ರ ಒಳಗಾಗಿ ಅರ್ಜಿಯೊಂದಿಗೆ ಈ ಕೆಳಕಂಡವರಿಗೆ ಸಲ್ಲಿಸಲು ತಿಳಿಸಲಾಗಿದೆ.
ಉ.ರಾ. ನಾಗೇಶ್, ಸಂಚಾಲಕರು, ಸಾಂಸ್ಕೃತಿಕ ಸಮಿತಿ ಮತ್ತು ಶಿಕ್ಷಕರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಕುಶಾಲನಗರ (ಮೊ: ೯೦೩೬೩ ೯೫೩೧೨), ಸೂದನ ಎಸ್. ಗೋಪಾಲ್, ಮುಖ್ಯ ಶಿಕ್ಷಕರು, ಮೂಕಾಂಬಿಕ ಪ್ರೌಢಶಾಲೆ, ಕುಶಾಲನಗರ (ಮೊ: ೯೮೪೫೯ ೬೨೪೦೧), ಭಾರತಿ ಶಿಕ್ಷಕಿ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಕುಶಾಲನಗರ, (ಮೊ: ೯೪೪೯೪ ೦೨೪೯೯).