ಒಡಿಶ್ಶಾ, ಜ. ೧೩ : ಒಡಿಶ್ಶಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪುರುಷರ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ಹಾಕಿ ತಂಡವು ತನ್ನ ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೆಲ್ಲುವ ಮೂಲಕ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದೆ. ತಂಡದ ಪರ ಹಾರ್ದಿಕ್ ಸಿಂಗ್ ಹಾಗೂ ಅಮಿತ್ ರೋಹಿದಾಸ್ ಅವರುಗಳು ತಲಾ ಒಂದು ಗೋಲು ಬಾರಿಸಿದ್ದು, ೨-೦ ಗೋಲುಗಳ ಮೂಲಕ ಭಾರತ ಜಯ ಸಾಧಿಸಿತು. ಅಮಿತ್ ರೋಹಿದಾಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಮೊದಲನೆಯ ದಿನ ೪ ಪಂದ್ಯಾಟಗಳು ನಡೆದಿದ್ದು, ಅರ್ಜೆಂಟೀನ ದಕ್ಷಿಣ ಆಫ್ರಿಕಾದ ವಿರುದ್ಧ ೧-೦ ಗೋಲುಗಳಿಂದ, ಆಸ್ಟೆçÃಲಿಯಾ ಫ್ರಾನ್ಸ್ ವಿರುದ್ಧ ೮-೦ ಗೋಲುಗಳಿಂದ, ಇಂಗ್ಲೆAಡ್ ಫ್ರಾನ್ಸ್ ವಿರುದ್ಧ ೫-೦ ಗೋಲುಗಳಿಂದ ಜಯ ಸಾಧಿಸಿದವು.
(ಮೊದಲ ಪುಟದಿಂದ) ತನ್ನ ಮುಂದಿನ ಪಂದ್ಯವನ್ನು ತಾ.೧೫ ರಂದು ಇಂಗ್ಲೆAಡ್ ವಿರುದ್ಧ ಭಾರತ ಆಡಲಿದ್ದು, ಸಂಜೆ ೭ ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.