ಮಡಿಕೇರಿ, ಜ. ೧೩ : ಪ್ರಸಕ್ತ ಸಾಲಿನ ೧೫ನೇ ಹಣಕಾಸು ಆಯೋಗದಡಿ ಸುಮಾರು ರೂ. ೧೪೮ ಲಕ್ಷ ವೆಚ್ಚದ ಕಾಮಗಾರಿಗೆ ಮತ್ತು ನಗರಸಭಾ ನಿಧಿ ಆಯೋಗ ಅನುದಾನದಡಿ ಸುಮಾರು ರೂ. ೧೧೧.೭೨ ಲಕ್ಷ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಮಡಿಕೇರಿ ನಗರ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಗರದ ವಿವಿಧ ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು ಸರಿಪಡಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ ೧೫ನೇ ಹಣಕಾಸು ಆಯೋಗದಡಿ ಹಾಗೂ ನಗರಸಭಾ ನಿಧಿಯಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಎಲ್ಲಾ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಸವಿತಾ ರಾಕೇಶ್, ಪೌರಾಯುಕ್ತ ವಿಜಯ, ಇಂಜಿನಿಯರ್ ಶಮಂತ್ ಕುಮಾರ್, ವಿವಿಧ ವಾರ್ಡ್ನ ನಗರಸಭಾ ಸದಸ್ಯರು ಹಾಗೂ ಇತರರು ಇದ್ದರು.