*ಗೋಣಿಕೊಪ್ಪ, ಜ. ೧೩: ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾ. ೧೫ ರಂದು ಮುಳಿಯ ಗೋಲ್ಡ್ ಸಭಾಂಗಣದಲ್ಲಿ ಕೊಡಗಿನ ಆಭರಣಗಳ ಚಿತ್ರ ರಚನ ಸ್ಪರ್ಧೆ ಆಯೋಜಿಸಲಾಗಿದೆ.
ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗಕ್ಕೆ ಪ್ರತ್ಯೇಕ ಪೈಪೋಟಿ ನಡೆಯಲಿದೆ. ಚಿತ್ರ ಬಿಡಿಸಲು ಕಾಗದವನ್ನು ನೀಡಲಾಗುವುದು. ಕೊಡಗಿನ ಸಾಂಪ್ರದಾಯಿಕ ಆಭರಣಗಳ ವಿಷಯ ಆಧಾರಿತ ಚಿತ್ರ ಬಿಡಿಸಬೇಕಿದೆ. ಹೆಚ್ಚಿನ ಮಾಹಿತಿಗೆ ೯೩೭೯೯೨೨೯೧೬, ೯೩೭೯೯೨೦೯೧೬ ಸಂಖ್ಯೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.