ಮಡಿಕೇರಿ, ಜ. ೧೩: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಾಡಗ ಗ್ರಾಮದಲ್ಲಿ ರೂ. ೨.೪೬ ಕೋಟಿ ಮತ್ತು ಕೊಳಗದಾಳು ಗ್ರಾಮದಲ್ಲಿ ರೂ. ೨.೪೫ ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಬಿ.ಬಾಡಗ ಮತ್ತು ಬಲ್ಲಮಾವಟಿ ಗ್ರಾಮದ ಸಂಪರ್ಕ ಸೇತುವೆ ಕಾಮಗಾರಿ ಪರಿಶೀಲಿಸಿದರು.