ಸುAಟಿಕೊಪ್ಪ, ಜ. ೧೩: ಇಲ್ಲಿನ ತಮಿಳು ಸಂಘದ ವತಿಯಿಂದ ೨೩ನೇ ವರ್ಷದ ಪೊಂಗಲ್ ಹಾಗೂ ಸಂಕ್ರಾAತಿ ಹಬ್ಬವನ್ನು ಅÀದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ತಾ. ೧೫ರಂದು ಬೆಳಿಗ್ಗೆ ೧೦ ಗಂಟೆಗೆ ಮಾದಾಪುರ ರಸ್ತೆಯಲ್ಲಿರುವ ವೃಕ್ಷೆÆÃಧ್ಭವ ಮಹಾಗಣಪತಿ ದೇವಸ್ಥಾನದಿಂದ ಹಾಲಿನ ಕಳಸದೊಂದಿಗೆ ಮೆರವಣಿಗೆ ಹೊರಟು ಅಲ್ಲಿಂದ ಸುಂಟಿಕೊಪ್ಪ ನಗರದ ಮೂಲಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮದ್ಯಾಹ್ನ ೧ ಗಂಟೆಯಿAದ ಸಂಜೆ ೩ ಗಂಟೆಯವರೆಗೆ ಅನ್ನದಾನ ನಡೆಯಲಿದೆ.

೩.೩೦ರಿಂದ ಸಂಜೆ ೬ ಗಂಟೆಯವರೆಗೆ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡಾಕೂಟ ನಡೆಯಲಿದ್ದು, ನಂತರ ಚಾಮುಂಡೇಶ್ವರಿ ದೇವರ ವಿದ್ಯುತ್‌ದೀಪ ಅಲಂಕೃತ ಮಂಟಪದ ಮೆರವಣಿಗೆ ಸುಂಟಿಕೊಪ್ಪ ಪಟ್ಟಣದಲ್ಲಿ ನಡೆಯಲಿದ್ದು, ನಂತರ ರಾತ್ರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ವಿಶೇಷ ಪೂಜೆಯ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಮಿಳು ಸಂಘದ ಅಧ್ಯಕ್ಷ ವಿಘ್ನೇಶ್ ತಿಳಿಸಿದ್ದಾರೆ. ಈ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್‌ಕುಮಾರ್, ಖಜಾಂಚಿ ವೇಲುಮುರುಗನ್, ಉಪಾಧ್ಯಕ್ಷ ಶರವಣ, ಸಂಘಟನಾ ಕಾರ್ಯದರ್ಶಿ ಎಸ್.ಸೂರ್ಯ ಹಾಜರಿದ್ದರು.